ಕನ್ನಡ ಚಳವಳಿ ಮುಖಂಡ ಪ್ರಕಾಶ್ ಬಂಧನದ ಹಿಂದೆ ಷಡ್ಯಂತ್ರ : ನಾರಾಯಣಗೌಡ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Karave

ಬೆಂಗಳೂರು,ಅ.3– ಕನ್ನಡ ಚಳವಳಿ ಮುಖಂಡ ಪ್ರಕಾಶ್ ಅವರ ಬಂಧನದ ಹಿಂದೆ ಷಡ್ಯಂತ್ರವಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆರೋಪಿಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ತೀರ್ಪು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕೆಲವು ಅಹಿತಕರ ಘಟನೆಗಳ ಸಂಬಂಧ ಈಗಾಗಲೇ ಅಮಾಯಕರನ್ನು ಬಂಧಿಸಿ ಜಾಮೀನು ಸಿಗದಂತೆ ಅವರನ್ನು ಜೈಲಿನಲ್ಲಿ ಕೂರಿಸಲಾಗಿದೆ. ಇದರ ನಡುವೆ ಕನ್ನಡ ಪ್ರಕಾಶ್ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬಂಧಿಸಲಾಗಿದೆ ಎಂದು ದೂರಿದರು. ನಗರದಲ್ಲಿ ಗಲಭೆಗಳು ನಡೆದಾಗ ಪ್ರಕಾಶ್ ಅವರು ಮಂಡ್ಯದಲ್ಲಿ ಜಿ. ಮಾದೇಗೌಡರ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಆದರೂ ಅವರು ಶಾಂತಿ ಸುವ್ಯವಸ್ಥೆ ಕದಡಲು ಪ್ರಚೋದನೆ ನೀಡಿದ್ದರು ಎಂದು ಕೆಲವರು ಸ್ವಾಭಾವಿಕವಾಗಿ ರಾಜ್ಯಕ್ಕೆ ಅನ್ಯಾಯವಾದಾಗ ಕನ್ನಡದ ಬಗ್ಗೆ ಅಭಿಮಾನಿ ಹೊಂದಿರುವ ಹಾಡುವ ಆಕ್ರೋಶ ಭರಿತ ಕೆಲ ಮಾತುಗಳನ್ನು ನೆಪವಾಗಿಟ್ಟುಕೊಂಡು ಪ್ರಕಾಶ್ ಅವರನ್ನು ಬಂಧಿಸಲಾಗಿದೆ. ಇದರ ಹಿಂದೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಪಾತ್ರವಿದೆ ಎಂದು ಆಪಾದಿಸಿದರು.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಈ ಅಧಿಕಾರಿ ವಿರುದ್ಧ ಪ್ರಕಾಶ್ ದನಿ ಎತ್ತಿದ್ದರು. ಇದರಿಂದಾಗಿ ಸೇಡು ತೀರಿಸಿಕೊಳ್ಳಲು ಕೆಲವರ ಜತೆಗೂಡಿ ಅವರನ್ನು ಬಂಧಿಸಿ ಹಿಂಸಿಸಲಾಗುತ್ತಿದೆ ಎಂದು ನಾರಾಯಣಗೌಡ ಆರೋಪಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin