ಕನ್ನಡ ಚಿತ್ರರಂಗಕ್ಕೆ ‘ಕಲಾ ಸಾಮ್ರಾಟ್’ ಎಸ್.ನಾರಾಯಣ್ ಬಂದು ಇಂದಿಗೆ 25 ವರ್ಷ

ಈ ಸುದ್ದಿಯನ್ನು ಶೇರ್ ಮಾಡಿ

Kala-Samrat---01

ಬೆಂಗಳೂರು, ಫೆ.11– ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ಚಿತ್ರರಂಗಕ್ಕೆ ಬಂದು 25 ವರ್ಷ ತುಂಬಿದೆ. ಅವರ ನಿರ್ದೇಶನದ ಮೊದಲ ಚಲನಚಿತ್ರ `ಚೈತ್ರದ ಪ್ರೇಮಾಂಜಲಿ’ 25 ವರ್ಷಗಳ ಹಿಂದೆ ಫೆ.11ರಂದು ಬಿಡುಗಡೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ 48 ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.  ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಎಸ್.ನಾರಾಯಣ್ ಮನಬಿಚ್ಚಿ ಮಾತನಾಡಿದರು.  ಜತೆಗೆ ನಟರಾಗಿ, ನಿರ್ಮಾಪಕರಾಗಿ , ವಿತರಕ ಹಾಗೂ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇವರ ನಿರ್ದೇಶನದ `ಪಂಟ’ ಚಿತ್ರ ಇದೇ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅನೂಪ್‍ರೇವಣ್ಣ ನಾಯಕ ನಟನಾಗಿದ್ದು, ಕೋಲಾರದ ಕನ್ನಡದ ಕುವರಿ ರಿತಿಕ್ಷಾ ನಾಯಕಿಯಾಗಿದ್ದಾರೆ. ಕರಿಸುಬ್ಬು, ವಿಶ್ವ, ಮತ್ತೊಬ್ಬ ಯುವ ಪ್ರತಿಭೆ ಇರ್ಫಾನ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಎಸ್.ನಾರಾಯಣ್ ಅವರ ಪ್ರಕಾರ ಪಂಟ ಚಿತ್ರ ಒಬ್ಬ ಜಾಣನ ಪಯಣ. ಇದು ದರೋಡೆ ಪ್ರಕರಣದ ಎಳೆ ಹೊಂದಿದ್ದು, ಬಹಳಷ್ಟು ಸಣ್ಣ, ಸಣ್ಣ ವಿಚಾರಗಳನ್ನು ಸೂಕ್ಷ್ಮವಾಗಿ ಹೇಳಿದ್ದಾರಂತೆ.
ಈ ಚಿತ್ರದಲ್ಲಿ ಎರಡು ಹಾಡುಗಳು ಇದ್ದು, ಕಿಚ್ಚ ಸುದೀಪ್ ಅವರು ಎಸ್.ನಾರಾಯಣ್ ಅವರ ಮೇಲಿನ ಅಭಿಮಾನಕ್ಕಾಗಿ ಒಂದು ಹಾಡನ್ನು ಹಾಡಿದ್ದಾರೆ. ಬಹಳ ನಿರೀಕ್ಷೆಯನ್ನು ಹುಟ್ಟಿಸಿರುವ ಈ ಪಂಟನ ಪ್ರವೇಶ ಇದೇ 17ರಂದು ಪರದೆಯ ಮೇಲೆ ರಾರಾಜಿಸಲಿದೆ.  ಈ ಚಿತ್ರವನ್ನು ಆಂಧ್ರದ ವಿಜಯವಾಡದ ಸುಬ್ರಹ್ಮಣ್ಯ ಎಂಬುವರು ನಿರ್ಮಿಸಿದ್ದಾರೆ.

ಇದೇ ವೇಳೆ ಇರ್ಫಾನ್ ತಂದೆ ಹಾಗೂ ಎಸ್.ನಾರಾಯಣ್ ಅವರ ಆತ್ಮೀಯ ಗೆಳೆಯರಾದ ಖಲೀಂಹುಲ್ಲಾ ಅವರು ನಾರಾಯಣ್ ಅವರಿಗೆ ಸಾಲು ಹೊದಿಸಿ, ಮೈಸೂರು ಪೇಟ ಧರಿಸಿ, ಹಾರ ಹಾಕಿ 25 ವರ್ಷದ ಯಶಸ್ವಿ ಪಯಣಕ್ಕೆ ಅಭಿನಂದನೆ ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin