ಕನ್ನಡ ನಾಡಿನ ಪ್ರಥಮ ಸಾಮ್ರಾಜ್ಯ ಕದಂಬರ ಉತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

5

ಕನ್ನಡದ ಪ್ರಥಮ ಸಾಮ್ರಾಜ್ಯ ಕದಂಬರ ನೆನಪಿನಾರ್ಥಕವಾಗಿ ಅವಿಸ್ಮರಣೀಯವಾಗಿ ಕದಂಬರ ನಾಡಾದ ಬನವಾಸಿಯಲ್ಲಿ ವಿಜೃಂಭಣೆಯ ಕದಂಬೋತ್ಸವವನ್ನು ಇಂದು ಮತ್ತು ನಾಳೆ ನಡೆಸಲು ಸರ್ಕಾರ ಅಣಿಗೊಳ್ಳುತ್ತಿರುವ ಹಿನ್ನಲೆಯಲ್ಲಿ ಬನವಾಸಿ ಸುತ್ತ ಪರಿಚಯ ಮಾಡಿ ಕೊಡುವುದೇ ಈ ವಿಶೇಷ ಲೇಖನ.

ಕನ್ನಡ ಭಾಷೆಯ ಪ್ರಾಂಥ್ಯದಲ್ಲಿ ಅನೇಕ ಅನ್ಯಭಾಷಿಕರ ಸಾಮ್ರಾಜ್ಯದ ಅಡಿಯಲ್ಲಿ ಬದುಕುತ್ತಿದ್ದ ಕಾಲದಲ್ಲಿ ಸುಮಾರು ಕ್ರಿ.ಶ 250ರ ಆಸುಪಾಸಿನಲ್ಲಿ ಅಚ್ಛ ಕನ್ನಡದ ನಾಡನ್ನು ಆಳಿದ ಸಾರ್ವಭೌಮರೆಂದರೆ ಕುಂತಳದ ಕದಂಬರು ಎಂಬುದು ಇತಿಹಾಸ. ಕನ್ನಡ ಭಾಷಿಕರಿಗಾಗಿ ಅದೊಂದು ಧರ್ಮ ಎಂದು ತಿಳಿದು ಕನ್ನಡ ನಾಡನ್ನು ಕಟ್ಟಿ ಅಂದಿನ ಪಲ್ಲವರೊಂದಿಗೆ ಹೋರಾಡಿ ಕುಂತಳ ಕದಂಬ ಎಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಹಾರಿತಿ ಪುತ್ರ ವೈದಿಕ ಬ್ರಾಹ್ಮಣ ಮಯೂರ ಶರ್ಮ(ವರ್ಮ)ನಿಗೆ ಸಲ್ಲುತ್ತದೆ. ಇದು ಇಂದಿನ ಶಿವಮೊಗ್ಗ ಜಿಲ್ಲೆಯ ತಾಳಗುಂದದಲ್ಲಿನ ಶಾಂತಿವರ್ಮನ ಶಿಲಾಶಾಸನದಿಂದ ಹಾಗೂ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಗುಡ್ನಾಪುರದ ರವಿವರ್ಮನ ಶಿಲಾಶಾಸನ, ಮಯೂರ ವರ್ಮನ ಚಂದ್ರವಳ್ಳಿಯ ಶಾಸನ ಅತ್ಯಂತ ಪ್ರಮುಖವಾಗಿವೆ ಎಂದು ತಿಳಿದು ಬರುತ್ತದೆ.

ಗಡ್ನಾಪುರದಲ್ಲಿ ಹಾಳು ಬಿದ್ದಿರುವ ರಾಣಿ ವಿಲಾಸವು ಈಗಲೂ ಇದಕ್ಕೆ ಸಾಕ್ಷಿಯಾಗಿದೆ. ಕನ್ನಡ ಪ್ರಾಂಥ್ಯದಲ್ಲಿನ ನಾಗರಿಕತೆಯ ವಯಸ್ಸು 6000ಕ್ಕೂ ಹೆಚ್ಚು ವರ್ಷಗಳು ಅದರಲ್ಲೂ ಕರ್ನಾಟಕ ಪ್ರಾಂಥ್ಯದಲ್ಲಿರವಷ್ಟು ಶಾಸನಗಳು, ಅವಶೇಷಗಳು ಮತ್ತೆಲ್ಲು ಕಂಡುಬರುವುದಿಲ್ಲ. ಆದರೂ ಭಾರತದಲ್ಲಿ ಕರ್ನಾಟಕದ ಇತಿಹಾಸ ಅಷ್ಟೊಂದು ಪ್ರಸಿದ್ಧವಾಗಿಲ್ಲ.  ಆದ್ದರಿಂದ ಕನ್ನಡ ನಾಡಿನಲ್ಲಿನ ಶಿಲಾಶಾಸನಗಳು, ತಾಮ್ರ ಶಾಸನಗಳು, ನಾಣ್ಯ, ಮೂರ್ತಿಗಳು, ಕಲ್ಲು ಕಟ್ಟಡಗಳು, ಸಾಹಿತ್ಯ, ಧರ್ಮ ಗ್ರಂಥಗಳು, ತತ್ವ ಗ್ರಂಥಗಳು ಮುಂತಾದ ಅವಶೇಷಗಳನ್ನು ಕಲೆಹಾಕುವ ಕೆಲಸ ನಮ್ಮ ಸಂಶೋಧಕರಿಂದ ಭರದಿಂದ ಸಾಗಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಶೀಮಂತ ಕನ್ನಡ ನಾಡಿನ ಐತಿಹಾಸಿಕ ಸಂಶೋಧನೆಯು ಅದೋಗತಿ ಯಲ್ಲಿರುವುದು ನಮ್ಮೆಲ್ಲ ಕನ್ನಡಿಗರ ದೌರ್ಭಾಗ್ಯವೇ ಸರಿ.

ಕನ್ನಡನಾಡಿನ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದು ಕನ್ನಡ ಸಾಮ್ರಾಜ್ಯದ ಗಡಿಯನ್ನು ಅಂದು ಕದಂಬರು ಹುಟ್ಟು ಹಾಕದಿದ್ದರೆ ಇಂದು ಕರ್ನಾಟಕವೆಂಬ ರಾಜ್ಯವೆ ಇಲ್ಲವಾಗಿರುತ್ತಿತ್ತು ಎಂದರೆ ಅತೀಶಯೋಕ್ತಿಯಾಗಲಾರದು. ಅಂದು ಕದಂಬರು ಕಟ್ಟಿದ ಕನ್ನಡನಾಡನ್ನು ಮುಂದೆ ಬಂದ ರಾಜರುಗಳು ವಿಸ್ತರಿಸಿದ ಪರಿಣಾಮ ದಿಂದಾಗಿ ಇಂದಿನ ಕರ್ನಾಟಕ ತಲೆ ಎತ್ತಿ ನಿಂತಿದೆ, ಆದರೆ, ಇಂದು ಅದೇ ಕರ್ನಾಟಕವನ್ನು ಸುತ್ತಲು ಗಡಿ ಕಾಯ್ದುಕೊಂಡು ಉಳಸಿಕೊಳ್ಳುವುದೆ ನಮಗೆ ಸಾಧ್ಯವಾಗುತ್ತಿಲ್ಲ.ಇಂಥ ಕನ್ನಡನಾಡನ್ನು ಕಟ್ಟಿದ ಕದಂಬರ ನೆನಪಿಗೋಸ್ಕರವಾಗಿ ಚಾಲನೆಗೊಂಡ ಕದಂಬೋತ್ಸವವು ಇಂದಿನವರೆಗೂ ವಿಜೃಂಭಣೆಯಿಂದ ಸಾಗಿ ಕೊಂಡು ಬಂದಿದೆ. ಇಂದು ಮತ್ತು ನಾಳೆ ಕದಂಬರ ರಾಜಧಾನಿ ಬನವಾಸಿಯಲ್ಲಿ ಜರುಗಲಿದೆ.

ಈ ಹಿನ್ನಲೆಯಲ್ಲಿನಿನ್ನೆ ಬನವಾಸಿ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರು ಅದ್ದೂರಿಯಾಗಿ ಕದಂಬ ಜ್ಯೋತಿ ಉದ್ಘಾಟನೆ ಮಾಡುವುದರ ಮೂಲಕ ಕದಂಬೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತ ದೇಶದಲ್ಲಿ ಕನ್ನಡ ನಾಡೆಂಬ ಪ್ರಾಂಥ್ಯವನ್ನು ಹುಟ್ಟುಹಾಕಿದ ಕೀರ್ತಿ ಕದಂಬರಿಗೆ ಸಲ್ಲುತ್ತದೆ. ಅದಕ್ಕೊಸ್ಕರವಾಗಿ ನಾವು ಸರ್ಕಾರದ ಮಟ್ಟದಲ್ಲಿ ಮಾತನಾಡಿ ಬನವಾಸಿಯನ್ನು ಅಭಿವೃದ್ಧಿಪಡಿಸಲು ಬನವಾಸಿ ಅಭಿವೃದ್ಧಿ ಪ್ರಾಧಿಕಾರವನ್ನು ಜಾರಿಗೆ ತಂದಿರುತ್ತೇವೆ. ಈ ಪ್ರಾಧಿಕಾರವು ರಾಜ್ಯದ 8ನೇ ಪ್ರಾಧಿಕಾರವಾಗಿರುತ್ತದೆ. ಈ ಕದಂಬೋತ್ಸವವು ಕೇವಲ ಸರ್ಕಾರಿ ಉತ್ಸವವಾಗದೆ ಜನರ ಉತ್ಸವವಾಗಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಆದಿ ಕವಿ ಪಂಪ ಹೇಳಿದ ಆರಂಕುಶಂ ಇಟ್ಟೊಡೆಯನ್ನ ಮನ ನೆನೆವುದು ಬನವಾಸಿ ದೇಶಮಂ ಎಂಬ ಪಂಪನ ಈ ಸಂದೇಶವು ಬನವಾಸಿಯ ಸಾಂಸ್ಕೃತ ಶ್ರೀಮಂತಿಕೆಯನ್ನು ಎತ್ತಿತೋರಿಸುತ್ತದೆ. ಬನವಾಸಿಯು ಕನ್ನಡದ ಪಪ್ರಥಮ ಸಾಮ್ರಾಜ್ಯ ಎಂಬುದರಲ್ಲಿ ಎರಡು ಮಾತಿಲ್ಲ ಅದಕ್ಕಾಗಿ ಬನವಾಸಿ ಯನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin