ಕನ್ನಡ ನಾಮಫಲಕ ಆಳವಡಿಸಲು ಕರವೇ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

krv

ಮಾಲೂರು, ಅ.27-ಕನ್ನಡದ ನಾಮಫಲಕಗಳನ್ನು ಆಳವಡಿಸುವಂತೆ ಒತ್ತಾಯಿಸಿ ಕರವೇಯಿಂದ ಮನವಿ ಪತ್ರವನ್ನು ಪುರಸಭಾ ಅಧ್ಯಕ್ಷ ರಾಮಮೂರ್ತಿಗೆ ನೀಡಲಾಯಿತು.ಕರವೇಯ ಲಕ್ಕೂರು ನಾಗರಾಜ್ ಮಾತನಾಡಿ, ಪ್ರಪಂಚದಲ್ಲೇ ಕನ್ನಡಿಗರು ಸಿಂಹ ಪಾಲಿನ ಸೇವೆ ಸಲ್ಲಿಸುವಂತಹ ಸ್ನೇಹ ಜೀವಿಗಳು. ಕನ್ನಡಿಗರು ಭಾಷೆಯ ವಿಷಯಕ್ಕೆ ಬಂದರೆ ತಕ್ಕ ಉತ್ತರ ನೀಡುತ್ತಾರೆ. ನೆಲ ಜಲ ಭಾಷೆಯ ದಕ್ಕೆಯಾದರೆ ಕನ್ನಡ ಪರ ಸಂಘಟನೆಗಳು ಹೋರಾಟಗಳನ್ನು ಮಾಡುತ್ತ ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು. ಅದೇ ರೀತಿ ಪಟ್ಟಣದ ನಿವಾಸಿಗರು ಹಾಗೂ ವರ್ತಕರು ಕನ್ನಡವನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಲು ಮುಂದಾಗಬೇಕು. ಅಂಗಡಿಗಳ ನಾಮಫಲಕವನ್ನು ಕನ್ನಡದಲ್ಲಿ ಬರಸಬೇಕು ಕನ್ನಡದಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿ ಬರೆಸುವುದರ ಮೂಲಕ ಕನ್ನಡತನವನ್ನು ಮೆರೆಯೋಣ ಎಂದರು. ಕರವೇಯ ಶ್ರೀನಿವಾಸ್, ಅನಿಲ್, ಭದ್ರ, ವಿನೋದ್, ಮಂಜುನಾಥ್, ರಾಕೇಶ್, ಶ್ರೀಧರ್, ಪ್ರವೀಣ್, ನೀರಜ್, ಮುನಿಯಪ್ಪ, ಮಹೇಶ್ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin