ಕನ್ನಡ ಬಾವುಟ ಬದಲಾವಣೆ ಮಾಡಿದರೆ ಉಗ್ರ ಹೋರಾಟ : ಸರ್ಕಾರಕ್ಕೆ ವಾಟಾಳ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

vatal-nagraj
ಬೆಂಗಳೂರು,ಜ.19-ಪ್ರಸ್ತುತ ಇರುವ ಕನ್ನಡ ಬಾವುಟದ ಸ್ವರೂಪವನ್ನು ಬದಲಾವಣೆ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‍ನಾಗರಾಜ್ ನೀಡಿದ್ದಾರೆ. ಕನ್ನಡ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಳೆದ 50 ವರ್ಷಗಳ ಹಿಂದೆ ನಾನು ರಾಮಮೂರ್ತಿಯವರು ಸೇರಿ ರಚಿಸಿದ ಹಳದಿ ಕೆಂಪು ಬಾವುಟ ನಾಡಿನಾದ್ಯಂತ ಬಳಕೆಯಾಗುತ್ತಿದೆ. ಈಗ ಆ ಬಾವುಟವನ್ನು ಬದಲಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಈ ಬಾವುಟವನ್ನು ಬದಲಾಯಿಸಬಾರದು.

ಪ್ರಸ್ತುತ ಇರುವ ಬಾವುಟ ಕನ್ನಡಿಗರ ಬಾವುಟಕ್ಕೂ, ಕನ್ನಡಿಗರಿಗೂ ಅವಿನಾಭವ ಸಂಬಂಧಿವಿದೆ. ಬಾವುಟ ಬದಲಾವಣೆಗೆ ಕೈಗೆ ಹಾಕಿದ್ದಾರೆ ರಾಜ್ಯಾದ್ಯಂತ ಜನ ದಂಗೆ ಏಳಲಿದ್ದಾರೆ ಎಂದು ಹೇಳಿದರು. ಬಾವುಟದ ಸ್ವರೂಪವನ್ನು ಬದಲಾವಣೆ ಮಾಡಲು ಸಮಿತಿ ರಚನೆ ಮಾಡಿದ್ದೇ ಅಕ್ಷಮ್ಯ ಅಪರಾಧವಾಗಿದೆ. ಆ ಸಮಿತಿಯವರು ಬಹಿಷ್ಕಾರ ಮಾಡಬೇಕಾಗಿತ್ತು. ಆದರೆ ಅವರು ಬಾವುಟ ಬದಲಾವಣೆ ಮಾಡಲು ಮುಂದಾಗಿರುವುದು ದುರದೃಷ್ಟಕರ ಎಂದರು.
ಮಹದಾಯಿಗಾಗಿ ಆಗ್ರಹಿಸಿ ಇದೇ 25ರಂದು ಕರೆ ಕೊಟ್ಟಿರುವ ಬಂದ್‍ಗೆ ಸರ್ಕಾರಿ ನೌಕರರು, ಶಾಲಾ ಕಾಲೇಜುಗಳವರು, ಹೋಟೆಲ್‍ಗಳವರು ಸೇರಿದಂತೆ ಎಲ್ಲರೂ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin