ಕಪಿಲಾ ನದಿಯಲ್ಲಿ ಮರಳು ದಂಧೆ ಅಬಾಧಿತ

ಈ ಸುದ್ದಿಯನ್ನು ಶೇರ್ ಮಾಡಿ

kapila-lake

ಟಿ.ನರಸೀಪುರ, ಏ.21- ಪಟ್ಟಣದ ಕಪಿಲಾ ನದಿ ಪಾತ್ರದಲ್ಲಿ ಎಗ್ಗಿಲ್ಲದೇ ಆಕ್ರಮ ಮರಳು ದಂಧೆ ನಡೆಯುತ್ತಿದ್ದು, ಮರಳು ಲೂಟಿಕೋರರು ಮಧ್ಯರಾತ್ರಿಯವರೆಗೆ ನದಿಯಿಂದ ಆಕ್ರಮ ಮರಳನ್ನು ತೆಗೆದು ನದಿಯ ತಟದಲ್ಲಿ ಶೇಖರಣೆ ಮಾಡುವ ಕಾಯಕ ಮಾಡಿಕೊಂಡಿದ್ದಾರೆ.ಮಧ್ಯ ರಾತ್ರಿಯ ನಂತರದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಮರಳು ತುಂಬಿಕೊಂಡು ಹಳೆಯ ಸ್ಕೂಟರ್‍ಗಳ ಮೂಲಕ ಪಟ್ಟಣದ ವಿವಿಧೆಡೆಗೆ ಸಾಗಾಣಿಕೆ ಮಾಡುತ್ತಿದ್ದಾರೆ. ಹಳೆಯ ಸ್ಕೂಟರ್‍ಗಳಲ್ಲಿ ಬೆಳಗಿನ 5 ಗಂಟೆಯವರೆಗೂ ಸಾಗಾಣಿಕೆ ಮಾಡುತ್ತಿರುವ ಪರಿಣಾಮ ಸ್ಕೂಟರ್‍ಗಳ ಶಬ್ದದಿಂದಾಗಿ ರಾತ್ರಿ ವೇಳೆ ಬಡಾವಣೆಗಳ ನಿವಾಸಿಗಳ ನಿದ್ರಿಗೆ ಭಂಗವಾಗಿದೆ.

ಇನ್ನೂ ಆಕ್ರಮ ಮರಳು ಲೂಟಿ ಕೋರರನ್ನು ಸದೆ ಬಡಿಯಲು ಪೊಲೀಸ್ ಇಲಾಖೆ ಕೂಡ ಸಾಕಷ್ಟು ಪ್ರಯತ್ನ ಪಟ್ಟರೂ ಇದರ ನಡುವೆಯೂ ಸಹ ಆಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ.ಲೋಕೋಪಯೋಗಿ ಸಚಿವರ ಕ್ಷೇತ್ರದಲ್ಲೇ ಆಕ್ರಮ ಮರಳು ಗಣಿಗಾರಿಕೆ ನಿರಾಂತಕವಾಗಿ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನ ಮೂಡಿಸಿದ್ದು, ಆಕ್ರಮ ಮರಳು ಗಣಿಗಾರಿಕೆಗೆ ಪ್ರಭಾವಿಗಳ ಕೈವಾಡವಿದೆಯೋ ಎಂಬ ಶಂಕೆ ಸಾರ್ವಜನಿಕ ವಲದಿಂದ ಕೇಳಿ ಬರುತ್ತಿದೆ.  ಕೂಡಲೇ ಸಂಬಂಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಇತ್ತ ಗಮನಹರಿಸಿ ಆಕ್ರಮ ಮರಳು ಗಣಿಗಾರಿಕೆ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಆಕ್ರಮ ಮರಳು ಸಾಗಾಣಿ ಮಾಡುವುದನ್ನು ತಡೆಗಟ್ಟಿ ನದಿಯ ಒಡಲನ್ನು ರಕ್ಷಿಸಬೇಕು ಹಾಗೂ ರಾತ್ರಿ ವೇಳೆ ಪಟ್ಟಣದ ಜನರು ನೆಮ್ಮದಿಯಿಂದ ನಿದ್ರಿಸಲು ಸಹಕರಿಸಬೇಕೆಂದು ಪಟ್ಟಣ ನಿವಾಸಿಗಳು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin