ಕಪ್ಪತಗುಡ್ಡಕ್ಕೆ ಬೆಂಕಿ : ಔಷಧಿ,ಸಸ್ಯಗಳು,ಸಾಲು ಮರಗಳು ಆಹುತಿ

ಈ ಸುದ್ದಿಯನ್ನು ಶೇರ್ ಮಾಡಿ

ಗದಗ, ಮಾ.4- ಉತ್ತರ ಕರ್ನಾಟಕದ ಹಸಿರು ಕಾಶಿ ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯ ಕಪ್ಪತ ಗುಡ್ಡಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಔಷಧಿ ಸಸ್ಯಗಳು ಹಾಗೂ ಸಾಲು ಮರಗಳು ಬೆಂಕಿಗೆ ಆಹುತಿಯಾಗಿ ಪದೇ ಪದೇ ಇಂತಹ ಅವಘಡಗಳು ಮರುಕಳಿಸುತ್ತಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಡರಗಿ ತಾಲೂಕಿನ ಶಿಂಗಟಾಲೂರು-ಆರೋಗೇರಿ ಹಾಗೂ ಕೇಲೂರ ಗ್ರಾಮಗಳ ಮಧ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ತಕ್ಷಣ ಬಂದು ಬೆಂಕಿ ನಂದಿಸದಿದ್ದುದಕ್ಕೆ ಮತ್ತಷ್ಟು ವ್ಯಾಪಿಸಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೆಂಕಿ ಹೊತ್ತಿಕೊಂಡ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಮೂರ್ನಾಲ್ಕು ಗಂಟೆಯಾದರೂ ಅವರು ಸ್ಥಳಕ್ಕೆ ಆಗಮಿಸಲಿಲ್ಲ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಅಥವಾ ಗುಡ್ಡದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಅದರಿಂದಾಗಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಕೆಲವರು ಹೇಳುತ್ತಿದ್ದಾರೆ.

17, 872.24 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಗುಡ್ಡದಲ್ಲಿ ಅಪರೂಪದ ಸಸ್ಯಸಂಪತ್ತು ಇದೆ. ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಮುಂದಾಗಿದ್ದರ ವಿರುದ್ಧ ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಭಾರೀ ಹೋರಾಟ ನಡೆಸಲಾಗಿತ್ತು.ಈ ಹಿಂದೆ ಹಲವು ಬಾರಿ ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದ ಘಟನೆಗಳು ನಡೆದಿದ್ದವು. ಪೆÇಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಮತ್ತೆ ಇಂತಹ ಘಟನೆ ಮರುಕಳಿಸಿ ವನ್ಯಸಂಪತ್ತು ನಾಶವಾಗುತ್ತಿರುವುದಕ್ಕೆ ಜನ ಅಸಮಾಧಾನಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin