ಕಪ್ಪತಗುಡ್ಡ ಸಂರಕ್ಷಣೆಗಾಗಿ ಕಾಲ್ನಡಿಗೆ ಜಾಥಾ

ಈ ಸುದ್ದಿಯನ್ನು ಶೇರ್ ಮಾಡಿ

5

ಗದಗ,ಡಿ.26- ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯಪ್ರದೇಶವನ್ನಾಗಿ ಘೋಷಿಸ ಬೇಕೆಂದು ಶ್ರೀ ಹಾಲಶಿವಯೋಗೇಶ್ವರ ಸಂಯುಕ್ತ ಪದವಿ ಪುರ್ವ ಮಹಾವಿದ್ಯಾಲಯ ಪೇಠಾ-ಆಲೂರ ಪ್ರೌಢ ಶಾಲೆ ವಿಭಾಗದ ವಿದ್ಯಾರ್ಥಿಗಳ ಪೇಠಾ ಆಲೂರಿನಿಂದ ಡಂಬಳ ಗ್ರಾಮದ ಮಾರ್ಗವಾಗಿ ಕಪ್ಪತ್ತಗುಡ್ಡಕ್ಕೆ ಕಾಲನಡಿಗೆಯ ಮೂಲಕ ಜಾಥಾ ಕೈಗೊಂಡರು. ಕಾಲನಡಿಗೆ ಜಾಥಾದ ನೇತೃತ್ವ ವಹಿಸಿದ್ದ ಶಾಲೆಯ ದೈಹಿಕ ಶಿಕ್ಷಕ ವಾಯ್.ಎಚ್. ಬಚೆನಳ್ಳಿ ಗುರುಗಳು ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ 36 ಗ್ರಾಮದ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಅನೇಕ ಔಷದಿ ಸಸ್ಯಗಳು ಅನೇಕ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಆದ್ದರಿಂದ ಸಂರಕ್ಷಿತ ಅರಣ್ಯ ಪ್ರದೇಶವೆಂದು ಪೋಸಿಸಬೇಕು ಎಂದು ತಿಳಿಸಿದರು.

ಶಾಲೆಯ ಪ್ರಾಚಾರ್ಯ ಡಿ.ಆರ್. ಚವಡಿ ಗುರುಗಳು ಮಾತನಾಡಿ ಅನೇಕ ವನ ಸಂಪತ್ತು ಅನೇಕ ಕೃಷಿ ಕುಟುಂಬಗಳು ಕೂಡಾ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ನಮ್ಮ ಶಾಲೆಯ ಎಲ್ಲರೂ ಕೂಡಾ ಸಂರಕ್ಷಿತ ಅರಣ್ಯವೆಂದು ಘೋಷಿಸಬೇಕೆಂದು ಈ ಜಾಥಾ ಮೂಲಕ ಮನವಿ ಮಾಡಿಕೊಂಡರು.ಕಪ್ಪತ್ತಗುಡ್ಡದಲ್ಲಿ ವಿದ್ಯಾರ್ಥಿಗಳಿಗಾಗಿ ಜನಪದ ಗೀತೆ, ಭಾಷಣ, ಆಟಗಳನ್ನು ಹಮ್ಮಿಕೊಂಡು ಪ್ರಶಸ್ತಿ ವಿತರಿಸಲಾಯಿತು. ಶಾಲೆಯ ಶಿಕ್ಷಕರಾದ ಗದ್ದಿಗೌಡರ, ಎಂ.ವಾಯ್. ತಳವಾರ, ಬಾಲರಾಜ ಹೂಗಾರ, ಜಿ.ಕೆ. ಹೊಸಮನಿ, ಎಸ್.ವ್ಹಿ. ಕರಿಗೌಡರ, ದಾನಪ್ಪ ಹೂಗಾರ ಉಪಸ್ಥಿತರಿದ್ದರು. ಎಲ್ಲರೂ ಜಥಾದಲ್ಲಿ ಪಾಲ್ಗೊಂಡ ವನ್ಯ ಸಂಪತ್ತು ಹಾಗೂ ಅರಣ್ಯವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ಘೋಷಿಸಲಾಯಿತು.

 

Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin