ಕಪ್ಪತ್ತಗುಡ್ಡ ಉಳಿಸುವುದು ಸರಕಾರದ ಪ್ರಮುಖ ಹೊಣೆಗಾರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

14

ಗದಗ,ಫೆ.14- ಉತ್ತರ ಕರ್ನಾಟಕದ ಹಿಮಾಲಯ ಪರ್ವತದಂತಿರುವ ಕಪ್ಪತಗುಡ್ಡಕ್ಕೆ ಸಂರಕ್ಷಿತ ಸ್ಥಾನಮಾನ ನೀಡಲು ಒತ್ತಾಯಿಸಿ ನಿನ್ನೆ ಕನ್ನಡದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಅಸಂಖ್ಯಾತ ಸಂಘಟನೆಗಳ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಇಲ್ಲಿನ ಮಹಾತ್ಮಗಾಂಧಿ ವರ್ತುಲದಲ್ಲಿ 3 ದಿನಗಳ ಅಹೋ ರಾತ್ರಿ ಧರಣಿಗೆ ಚಾಲನೆ ನೀಡಲಾಯಿತು. ಧರಣಿಗೂ ಮುನ್ನ ಶ್ರೀಮಠದ ಆವರಣದಲ್ಲಿ ಸಿದ್ದಲಿಂಗ ಸ್ವಾಮೀಜಿಗಳು ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನಂತರ ಮೆರವಣಿಗೆ ಶ್ರೀಮಠದ ಮಾರ್ಗವಾಗಿ ಹುಯಿಲಗೋಳ ನಾರಾಯಣ ವೃತ್ತ, ಬಸವೇಶ್ವರ ವೃತ್ತ, ಕೆ.ಎಚ್. ಪಾಟೀಲ್ ವೃತ್ತ, ಭೂಮರೆಡ್ಡಿ ವೃತ್ತ ಮಾರ್ಗವಾಗಿ ಅಹೋ ರಾತ್ರಿ ಧರಣಿ ಸ್ಥಳವಾದ ಮಹಾತ್ಮಗಾಂಧಿ ವರ್ತುದಲ್ಲಿರುವ ಮಹಾತ್ಮಗಾಂಧಿಜಿ ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ ಹಾಗೂ ಸಂವಿಧಾನಶಿಲ್ಪಿ ಡಾ. ಬಿ.ಆರ್. ಆಂಬೇಡ್ಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.

ಧರಣಿ ನಿರತರು ಭೂಮರೆಡ್ಡಿ ಸುಮಾರು 10 ನಿಮಿಷಗಳ ಕಾಳ ಮಾನವನ ಸರಪಳಿ ನಿರ್ಮಿಸಿ ಸರಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು. ಮೆರವಣಿಗೆವುದ್ದಕ್ಕೂ ಪರಿಸರವಾದಿಗಳು ಕಪ್ಪತಗುಡ್ಡ ಉಳಿವಿಗಾಗಿ ಪ್ರಾಣ ಕೊಡಲು ಸದಾ ಸಿದ್ದ ಎಂದು ಮುಗಿಲು ಮುಟ್ಟುವ ಘೋಷಣೆಯನ್ನು ಹಾಕುತ್ತಿರುವುದು ವಿಶೇಷವಾಗಿತ್ತು.  ಅಮೂಲ್ಯ ಸಸ್ಯ ಸಂಪತ್ತು, ಔಷದಿಗಳನ್ನು ಒಡಲಲ್ಲಿ ಹೊತ್ತ ಎಪ್ಪತ್ತ ಗಿರಿಗಿಂತ ಕಪ್ಪತಗಿರಿ ಮೇಲು, ಅದನ್ನು ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಮಾಡಿ ಕೊಡುವುದಿಲ್ಲ. ಐತಿಹಾಸಿಕತೆಯನ್ನು ಮೆರೆಯುವ ಕಪ್ಪತಗುಡ್ಡ ಮಾನವ ಸಮುದಾಯಕ್ಕೆ ಅಮೃತದ ಸಮಾನವಾಗಿದೆ. ಆ ಹಿನ್ನಲೆಯಲ್ಲಿ ಅದನ್ನು ಉಳಿಸುವುದು ಸರಕಾರದ ಪ್ರಮುಖ ಹೊಣೆಗಾರಿಕೆಯಾಗಿದೆ ಎಂಬುದು ಪರಿಸರವಾದಿಗಳ ಅಭಿಪ್ರಾಯ ಸ್ಪಷ್ಟವಾಗಿ ಕಂಡು ಬಂದಿತು.

ಕಪ್ಪತಗುಡ್ಡಕ್ಕೆ ಸಂರಕ್ಷಿತ ಸ್ಥಾನಮಾನ ಕೊಡಿಸುವ ಹಿನ್ನಲೆಯಲ್ಲಿ 3 ದಿನಗಳ ಕಾಲ ಅಹೋರಾತ್ರಿ ಧರಣಿ ಮಾಡಲಾಗುವುದು. ರಾಜ್ಯ ಸರಕಾರ ಇದಕ್ಕೆ ಸ್ಪಂದಿಸದಿದ್ದರೇ ಮುಂದೇ ಉಗ್ರ ರೀತಿಯಲ್ಲಿ ಹೋರಾಟ ನಡೆಸುವ ನಿರೀಕ್ಷೆಯಿದೆ. ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಈಗಾಗಲೇ ಕಳೆದ 600 ದಿನಗಳಿಂದ ಕಳಸಾಬಂಡೂರಿ ಹೋರಾಟದೊಂದಿಗೆ ದೇಶದ ಗಮನ ಸೆಳೆದಿದೆ. ಮತ್ತೇ ಕಪ್ಪತಗುಡ್ಡಕ್ಕೆ ಸಂರಕ್ಷಿತ ಸ್ಥಾನಮಾನ ಕೊಡಬೇಕೆಂಬ ಕೂಗು ತೀವ್ರಗೊಂಡಿದೆ. ಸುಮಾರು 10000ಕ್ಕೂ ಹೆಚ್ಚು ಪರಿಸರವಾದಿಗಳು ಧರಣಿಯಲ್ಲಿ ಭಾಗವಹಿಸಿರುವ ಅಂದಾಜಿದೆ. ಈ ಸಂದರ್ಭದಲ್ಲಿ ಕಪೋತಗಿರಿ ನಂದಿವೇರಿ ಸ್ವಾಮೀಜಿ, ರವಿಕೃಷ್ಣಾ ರೆಡ್ಡಿ, ಮಾಜಿ ಶಾಸಕ ಡಿ.ಆರ್. ಪಾಟೀಲ್, ವ್ಹಾ.ಎನ್. ಗೌಡರ, ಕನ್ನಡ ಸಂಘಟಕ ಗಣೇಶಸಿಂಗ್ ಬ್ಯಾಳಿ, ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಸಯ್ಯದ ಖಾಲೀದ ಕೊಪ್ಪಳ, ಪಿ. ಸುಬ್ರಮಣ್ಯರೆಡ್ಡಿ, ಎಸ್.ಎಸ್. ರಡ್ಡೇರ, ಹಿರೇಮಠ, ಭೂಸನೂರಮಠ, ಚಂದ್ರಕಾಂತ ಚವ್ಹಾಣ, ರವಿಕಾಂತ ಅಂಗಡಿ, ಎನ್.ಕೆ. ಕೊರ್ಲಹಳ್ಳಿ, ವಿಜಯ ಮುಳಗುಂದ, ರವಿ ವಗ್ಗನವರ ಸೇರಿದಂತೆ ಅಸಂಖ್ಯಾತ ಸಂಘಟಕರು ಹಾಗೂ ಶಾಲಾ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗವಹಿಸಿದ್ದರು.
ಕಪ್ಪತ್ತಗುಡ್ಡದ ಬಗ್ಗೆ ಯಾವುದೇ ರಾಜಕೀಯ ಪಕ್ಷಕ್ಕೂ ಕಾಳಜಿಯಿಲ್ಲ. ಬ್ರಟಿಷರ ಕಾಲಾವಧಿಯಲ್ಲಿ ಕಪ್ಪತ್ತಗುಡ್ಡವನ್ನು ಮೀಸಲು ಅರಣ್ಯ ಪ್ರದೇಶ ಘೋಷಣೆ ಮಾಡಲಾಗಿತ್ತು. ಕಪ್ಪತ್ತಗುಡ್ಡದ ಬಗ್ಗೆ ಬ್ರಟಿಷರಿಗಿದ್ದ ಕಾಳಜಿ ನಮ್ಮ ಸರ್ಕಾರಕ್ಕಿಲ್ಲದಂತಾಗಿದೆ ಎಂದರು.ಕಪ್ಪತ್ತಗುಡ್ಡದಲ್ಲಿ 200ಕ್ಕೂ ಹೆಚ್ಚು ಪವನ ವಿದ್ಯುತ್ ಯಂತ್ರ ಸ್ಥಾಪಿಸಲಾಗಿದೆ. ಆದ್ರೆ ನಮ್ಮಲ್ಲಿ ಉತ್ಪಾದನೆಯಾಗುವ ವಿದ್ಯುತ್ ನಮಗೆ ದೊರೆಯದಿರುವುದು ಬೇಸರ ತಂದಿದೆ. ಸರ್ಕಾರ ಬಲ್ದೋಟಗೆ ಮಣೆಹಾಕೋದು ಬೇಡ, ಸರ್ಕಾರ ಶ್ರೀಮಂತ ಬಲ್ದೋಟನನ್ನೆ ಮತ್ತೆ ಶ್ರೀಮಂತಗೊಳಿಸುವುದು ಬೇಡ. ಬಲ್ಡೋಟನಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲತೆ ಇಲ್ಲ. ಗದಗ ಜಿಲ್ಲೆ ಕಪ್ಪತ್ತಗುಡ್ಡ ಸಂರಕ್ಷಣೆ ಪ್ರದೇಶಗಾಗಿ ಮೂರು ದಿನಗಳ ಕಾಲ ಅಹೋರಾತ್ರಿ ಉಪವಾಸ ಧರಣಿ ಸತ್ಯಾಗ್ರಹ ನಡೆದಿದೆ ಎಂದು ತೋಂಟದಾರ್ಯ ಶ್ರೀಗಳು ಸರ್ಕಾರ ನೀತಿ ಖಂಡಿಸಿ ಬೇಸರ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin