ಕಪ್ಪತ್ತಗುಡ್ಡ ಸಂರಕ್ಷಣೆಗೆ ಮುಖ್ಯಮಂತ್ರಿ ಜನಪರ ನಿರ್ಧಾರ ಕೈಗೊಳ್ಳಲಿ : ಬಸವರಾಜ ಹೊರಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

basavaraj--hoatti

ಗದಗ,ಫೆ.23- ನಾಡಿನ ಅಮೂಲ್ಯ ಆಸ್ತಿ, ವೈವಿಧ್ಯಮಯ ಸಸ್ಯರಾಶಿ ಹೊಂದಿದ ಕಪ್ಪತ್ತಗುಡ್ಡ ಸಂರಕ್ಷಣೆ ಮಾಡುವ ಮತ್ತು ಕಾಪಾಡುವ ಹೊಣೆಗಾರಿಕೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೇಗನೇ ಜನಪರ ಹಾಗೂ ದಿಟ್ಟ ನಿರ್ಧಾರ ಕೈಗೊಂಡು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲು ಮಾಜಿ ಸಚಿವ, ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ. ಬಸವರಾಜ ಧಾರವಾಡ ತಿಳಿಸಿದ್ದಾರೆ. ಕಪ್ಪತ್ತಗುಡ್ಡದಲ್ಲಿರುವ ಸಂಪತ್ತನ್ನು ನುಂಗಲು ಕಳೆದ ದಶಕದಿಂದ ಹೊಂಚು ಹಾಕುತ್ತಿರುವ ಕೆಲವು ಬಂಡವಾಳಶಾಹಿಗಳು, ಗಣಿಗಳ್ಳರು, ಉದ್ಯಮಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರ್ಕಾರವನ್ನೇ ದಾರಿ ತಪ್ಪಿಸಿದ ಸಂಗತಿ ದಿ. 20ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೈಯಲ್ಲಿ ತಮ್ಮ ಗಮನಕ್ಕೆ ಬಂದಿದೆ. ಇಂತಹ ಹಲವಾರು ಅಮೂಲ್ಯ ಆಸ್ತಿ ದೋಚುವ ಹಾಗೂ ಕೆಲ ಮಹತ್ವದ ಸಂಗತಿಗಳ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರದ ಹಾದಿ ತಪ್ಪಿಸುವ ಪ್ರಯತ್ನ ಆಗಾಗ ಮಾಡುತ್ತಿವೆ. ಕಪ್ಪತ್ತಗುಡ್ಡದ ಸಂರಕ್ಷಣೆಗಾಗಿ ಇಡೀ ನಾಡೆ ಒಂದಾಗಿ ಒಗ್ಗಟ್ಟಾಗಿ ಗದುಗಿನ ತೋಂಟದಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಫೆ. 13, 14, 15ರಂದು ಅಹೋರಾತ್ರಿ ಧರಣಿ ನಡೆಸಿ ತಮ್ಮ ಗಮನವನ್ನು ಸೆಳೆಯುವ ಮೂಲಕ ಕಪ್ಪತ್ತಗುಡ್ಡದ ಮಹತ್ವವನ್ನು ನಾಡಿನ ಜನತೆಗೆ ಅರಿವು ಮೂಡಿಸಿದ್ದಾರೆ.

ಉತ್ತರ ಕರ್ನಾಟಕದ ಅಮೂಲ್ಯ ಆಸ್ತಿಯಾದ ಕಪ್ಪತ್ತಗುಡ್ಡವನ್ನು ಉಳಿಸುವುದು ನಮ್ಮೆಲ್ಲರ ಹೊಣೆ ಮತ್ತು ಜವಾಬ್ದಾರಿ ಹಳ್ಳಿ, ಗ್ರಾಮ, ಪಟ್ಟಣಗಳನ್ನು ಮರು ಸೃಷ್ಟಿಮಾಡಬಹುದು ಆದರೆ ಅಪೂರ್ವ ನಿಸರ್ಗ ಸಂಪತ್ತು ಜೀವರಾಶಿ, ಪ್ರಾಣಿ ಪಕ್ಷಿ ಸಂಕುಲಕ್ಕೆ ಔಷಧೀಯ ಖನೀಜ ಸಂಪತ್ತಿಗೆ ಹೆಸರುವಾಸಿಯಾದ ಕಪೋತಗಿರಿಯನ್ನು ಮರು ಸೃಷ್ಟಿ ಮಾಡುವುದು ಅಸಾಧ್ಯ ಮುಂದಿನ ಪೀಳಿಗೆಗೆ ಕಪ್ಪತ್ತಗುಡ್ಡದ ಮಹತ್ವ ತಿಳಿಸುವುದರ ಜೊತೆಗೆ ಪರಿಸರ ಸಮತೋಲನ ಕಾಯ್ದುಕೊಳ್ಳುವ ಕಪ್ಪತ್ತಗುಡ್ಡವನ್ನು ಉಳಿಸಿಕೊಳ್ಳುವುದು ಅವಶ್ಯವಿದೆ ಎಂದರು. ತಾವು ಮೊದಲಿನಿಂದಲೂ ಜನಪರ, ಯೋಜನೆಯ ಒಲವುನ್ನು ಬಳೆಸಿಕೊಂಡು ಬಂದವರು ನೆಲ, ಜಲ, ಭಾಷೆ ಬಗ್ಗೆ ಹೋರಾಡುತ್ತ ರಾಜಕೀಯ ಬದುಕನ್ನು ಕಟ್ಟಿಕೊಂಡವರು. ಉತ್ತರ ಕರ್ನಾಟಕ ಅಮೂಲ್ಯ ಆಸ್ತಿಯಾದ ಕಪ್ಪತ್ತಗುಡ್ಡ ಸಂರಕ್ಷಣೆ ಮಾಡುವ ಹೊಣೆಗಾರಿಗೆ ತಮ್ಮ ಮೇಲೆ ಇರುವುದರಿಂದ ತಮ್ಮ ನಿರ್ಧಾರವನ್ನು ಇಡೀ ನಾಡೆ ಗಮನಿಸುತ್ತಿದೆ.

ತಾವು ನೀಡುವ ದಿಟ್ಟ ಹಾಗೂ ಜನಪರ ನಿರ್ಧಾರವನ್ನು ಇಡಿ ನಾಡು ತಮ್ಮನ್ನು ಗೌರವಿಸುತ್ತದೆ.ಯಾವುದೇ ನಾಲ್ಕಾರು ಜನರ ಒತ್ತಡಕ್ಕೆ ಮಣಿಯದೇ ಆರು ಕೋಟಿ ಕನ್ನಡಿಗರ ಧ್ವನಿಯಾಗಿ ತಮ್ಮ ನಿರ್ಧಾರ ಪ್ರಕಟವಾಗಲೆಂಬುದೇ ನನ್ನ ಆಶಯ.ಈ ಸಮಸ್ಯೆಯನ್ನು ಬೇಗನೇ ಹಾಗೂ ಸರಿಯಾದ ಸಮಯದಲ್ಲಿ ಬಗೆಹರಿಸದಿದ್ದಲ್ಲಿ ಕಾನೂನು, ಸುವ್ಯವಸ್ಥೆ ಸಮಸ್ಯೆ ಉದ್ಭವವಾಗುವ ಸಂಭವವಿದೆ. ಈ ವಿಚಾರವಾಗಿ ಕಳೆದ ಅಧಿವೇಶನದಲ್ಲಿ ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಅಹೋರಾತ್ರಿ ಧರಣಿ ವಿಷಯವಾಗಿ ಸಾಕಷ್ಟು ಮಹತ್ವದ ವಿಷಯದ ಮೇಲೆ ಬೆಳಕು ಚೆಲ್ಲಿದ್ದೇನೆ. ಬೇಗನೆ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಸ್ಥಾನಮಾನ ನೀಡಿ ರಾಜ್ಯದ ಅಮೂಲ್ಯ ಆಸ್ತಿಯನ್ನು ಉಳಿಸಲು ತಾವು ಮಹತ್ವದ ನಿರ್ಧಾರ ಪ್ರಕಟಿಸಲು ಕೋರುತ್ತೇನೆ ಎಂದು ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin