ಕಬಡ್ಡಿ ಪ್ರೋತ್ಸಾಹಿಸಿ  : ಬಾಕ್ಸರ್ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Kabbadi   Playing

ಕೆಆರ್‍ಪುರ, ಆ.8- ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಪ್ರೋತ್ಸಾಹಿಸುವುದು ಸಾಮಾಜಿಕ ಕಳಕಳಿ ಯುಳ್ಳ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ರಾಮಮೂರ್ತಿನಗರ ಕ್ರೀಡಾ ಮಂ ಪ್ರೋತ್ಸಾಡಳಿಯ ಅಧ್ಯಕ್ಷ ಬಾಕ್ಸರ್ ನಾಗರಾಜ್ ತಿಳಿಸಿದರು.
ರಾಮಮೂರ್ತಿನಗರದಲ್ಲಿ ರಾಮಮೂರ್ತಿ ನಗರ ಕ್ರೀಡಾಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತವಾದ ತಂಡಕ್ಕೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಪ್ರೋತ್ಸಾಹ ಸಿಕ್ಕಾಗ ಮಾತ್ರ ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಲು ಸಾಧ್ಯ. ಇಂತಹ ಕಾರ್ಯವನ್ನು ತಾವು ಪ್ರತಿ ವರ್ಷ ಹಮ್ಮಿಕೊಳ್ಳುತ್ತಾ ಬರುತ್ತಿರುವುದಾಗಿ ಹೇಳಿದರು.ಸೋಲು-ಗೆಲುವು ಸರ್ವೇ ಸಾಮಾನ್ಯ. ಎರಡನ್ನೂ ಸಮಾನಾಗಿ ಸ್ವೀಕರಿಸಿ ಮುಂದೆ ನುಗ್ಗು ವವನು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾನೆ ಎಂದು ಹೇಳಿದರು.ಕ್ರೀಡೆಯನ್ನು ಸ್ಪೋರ್ಟಿವಾಗಿಟ್ಟುಕೊಂಡು ಸ್ನೇಹವನ್ನು ಬೆಳೆಸಿ. ಒಳ್ಳೆ ಗುಂಪೊಂದು  ಕಟ್ಟಿ ಗುರಿ ತಲುಪುವ ಪಾಠ ಈ ಪಂದ್ಯ ಹೇಳಿಕೊಡುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬನಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆ ಹೊರ ಬರಲು ಸರಿಯಾದ ವೇದಿಕೆ ಸಿಗುವುದಿಲ್ಲ. ಇಂತಹ ಪ್ರತಿಭೆ ಗಳನ್ನು ಗುರುತಿಸಿ ಅವರಿಗೊಂದು ವೇದಿಕೆ ಸೃಷ್ಟಿ ಮಾಡಿಕೊಡುವ ಕೆಲಸ ನಾವೆಲ್ಲರೂ ಮಾಡಿಕೊಡಬೇಕು ಎಂದು ಹೇಳಿದರು.ಎರಡು ದಿನಗಳು ನಡೆದ ಈ ಪಂದ್ಯಾವಳಿಯಲ್ಲಿ ಎಲ್ಲರೂ ಉತ್ತಮವಾಗಿ ಆಟ ವಾಡಿದ್ದು, ಅರ್ಹರು ಪ್ರಶಸ್ತಿ ಪಡೆದಿದ್ದಾರೆ ಎಂದು ತಿಳಿಸಿದರು.
ಮೊದಲನೇ ಬಹುಮಾನ ಆಳ್ವಾಸ್ ಮೂಡಬಿದರೆ ಪಡೆದುಕೊಂಡರೆ ಎರಡನೇ ಬಹುಮಾನವನ್ನು ಕೇಶವ ಕಬಡ್ಡಿ ಕ್ಲಬ್ ಪಡೆದುಕೊಂಡಿತು. ಇನ್ನು ಉಳಿದ ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಕ್ರಮವಾಗಿ ಶಕ್ತಿ ಕಬಡ್ಡಿ ಕ್ಲಬ್ ಹಾಗೂ ನಾರಾಯಣಪುರ ಕಬಡ್ಡಿ ಕ್ಲಬ್ ಪಡೆಯಿತು.ಬೆಸ್ಟ್ ಆಲ್‍ರೌಂಡರ್ ಆಗಿ ಆಳ್ವಾಸ್‍ನ ಜಸ್ವಂತ್ ಪಡೆದರೆ, ಬೆಸ್ಟ್ ರೈಡರ್ ಕೆಶವ ತಂಡದ ಲೋಕೇಶ್ ಪಡೆದರು. ಬೆಸ್ಟ್ ಕ್ಯಾಚರ್ ಶಕ್ತಿ ಕಬಡ್ಡಿ ಕ್ಲಬ್‍ನ ಸಂತೋಷ್ ಪಡೆದರೆ ಬೆಸ್ಟ್ ತಂಡ ಪ್ರಶಸ್ತಿಯನ್ನು ಶಕ್ತಿ ತಂಡ ಪಡೆಯಿತು.ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮುಖಂಡ ರಾದ ಜಗದೀಶ್, ಸುನೀಲ್, ಪಿಎನ್‍ಟಿ ವೆಂಕಟಸ್ವಾಮಿ, ಡಿ.ವೆಂಕಟೇಶ್, ಪುಣಚ, ಶ್ರೀನಿವಾಸಬಾಬು, ಕಾಂಬ್ಳೆ, ಜಗದೀಶ್, ವಿಜಯ್, ಮಂಜುನಾಥ್, ಕಾರ್ತಿಕ್, ವಿಕ್ಕಿ ಮತ್ತಿತರರಿದ್ದರು.

Facebook Comments

Sri Raghav

Admin