ಕಬಿನಿ ಹಿನ್ನೀರಿನಲ್ಲಿ ಮುಳುಗಿ ತಂದೆ-ಮಕ್ಕಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kabibni-01
ಎಚ್.ಡಿ.ಕೋಟೆ,ಏ.26- ಕಬಿನಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳೊಂದಿಗೆ ತಂದೆ ಜಲಸಮಾಧಿಯಾದ ಭೀಕರ ದುರಂತ ಕೇರಳದ ಪುಟ್ಟಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳದ ಕಬಿನಿಗಿರಿ ನಿವಾಸಿಗಳಾದ ಚಾಲಕಲ್ ಬೇಬಿ (53), ಮಗ ಅಜಿತ್(24) ಮತ್ತು ಅನಿತಾ(18) ನೀರು ಪಾಲಾದ ದುರ್ದೈವಿಗಳು. ಇಂದು ಬೆಳಗ್ಗೆ ಮೈಸೂರು ಜಿಲ್ಲೆ ಎಚ್‍ಡಿಕೋಟೆ ತಾಲೂಕಿನ ಕೇರಳದ ಗಡಿಭಾಗವಾದ ಗೋಳೂರು ಬಳಿ ಕಬಿನಿ ಹಿನ್ನೀರಿನಲ್ಲಿ ಸ್ನಾನಮಾಡಲೆಂದು ಅನಿತಾ ನೀರಿಗಿಳಿದಿದ್ದಾರೆ.  ಈ ಸಂದರ್ಭದಲ್ಲಿ ಅನಿತಾ ನೀರಿನಲಿಲ ಮುಳುಗುತ್ತಿರುವುದನ್ನು ಗಮನಿಸಿದ ತಂದೆ ಚಾಲಕಲ್ ಬೇಬಿ ಅವರು ಮಗಳನ್ನು ರಕ್ಷಿಸಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ತಂದೆ-ತಂಗಿ ಇಬ್ಬರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಅಜಿತ್ ಇವರ ರಕ್ಣೆಗಾಗಿ ನೀರಿಗಿಳಿದಾಗ ಘೋರ ದುರಂತವೇ ನಡೆದುಮೂವರು ಜಲಸಮಾಧಿಯಾಗಿದ್ದಾರೆ.   ಸುದ್ದಿ ತಿಳಿಯುತ್ತಿದ್ದಂತೆ ಪುಟ್ಳಿಠಾಣೆ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಮೂವರ ಶವಗಳನ್ನು ಮೇಳೆತ್ತಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.  ತಂದೆ-ಇಬ್ಬರು ಮಕ್ಕಳ ದುರಂತ ಸಾವಿನಿಂದ ಇವರ ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದೆ.  ಪುಟ್ಟಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin