ಕಬ್ಬನ್‍ಪಾರ್ಕ್-ಲಾಲ್‍ಬಾಗ್‍ಗೆ ಆಧುನಿಕತೆ ಟಚ್

ಈ ಸುದ್ದಿಯನ್ನು ಶೇರ್ ಮಾಡಿ

sdghasdghhh

ಬೆಂಗಳೂರು, ಆ.6– ನಗರದ ಕಬ್ಬನ್‍ಪಾರ್ಕ್ ಹಾಗೂ ಲಾಲ್‍ಬಾಗ್‍ಗಳಿಗೆ ಇನ್ನಷ್ಟು ಆಧುನಿಕ ಟಚ್ ನೀಡುವ ಉದ್ದೇಶ ತಮಗಿದ್ದು, ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿ ಪಡಿಸುವುದಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‍ಬಾಗ್‍ನಲ್ಲಿ ಆಯೋಜಿಸಲಾಗಿರುವ 214ನೆ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ತಂತ್ರಜ್ಞಾನ ಗಳ ಮೂಲಕ ಸಸ್ಯಕಾಶಿ ಲಾಲ್‍ಬಾಗ್ ಹಾಗೂ ಕಬ್ಬನ್‍ಪಾರ್ಕ್‍ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಹೊಸತನ ನೀಡುವ ಆಲೋಚನೆ ಇದೆ. ಸದ್ಯದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳುವೆ ಎಂದು ಮಾಹಿತಿ ನೀಡಿದರು. ರಾಜ್ಯದ ನಾಲ್ಕು ಕಡೆ ಕಬ್ಬನ್‍ಪಾರ್ಕ್ ಮತ್ತು ಲಾಲ್‍ಬಾಗ್ ಮಾದರಿಯಲ್ಲಿ ಹೂದೋಟ ಮತ್ತು ಪಾರ್ಕ್ ಅಭಿವೃದ್ಧಿ ಪಡಿಸಲು ಸೌಂದರ್ಯೀಕರಣ ನಕ್ಷೆ ಸಿದ್ಧಪಡಿಸಿದೆ ಎಂದರು.

Kabban-1

ರಾಜ್ಯದ ನಾಲ್ಕೂ ಕಡೆ ಲಾಲ್‍ಬಾಗ್ ಮತ್ತು ಕಬ್ಬನ್‍ಪಾರ್ಕ್ ಮಾದರಿಯಲ್ಲಿ ಸಸ್ಯತೋಟ ಮತ್ತು ಪಾರ್ಕ್‍ಗಳನ್ನು ನಿರ್ಮಿಸುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದರೂ ಅದನ್ನು ಅನುಷ್ಠಾನಗೊಳಿಸಿಲ್ಲ. ಸಮರ್ಪಕವಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಎನ್.ಎಚ್.ಮರಿಗೌಡ ಅವರ ಶ್ರಮ ದಿಂದಾಗಿ ರಾಜ್ಯದಲ್ಲಿ 15 ಸಾವಿರ  ಎಕರೆಯಲ್ಲಿ ತಾಳೆಬೆಳೆ ಬೆಳೆಯಲಾಗುತ್ತಿದೆ. ಇತ್ತೀಚೆಗೆ ತಾಳೆಬೀಜದ ಬೆಳೆ ಕಡಿಮೆಯಾಗಿದ್ದು, ಏಳು ಸಾವಿರಕ್ಕೆ ಇಳಿದಿತ್ತು. ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ 9500ಕ್ಕೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು.

Kabban-3

ತೋಟಗಾರಿಕಾ ಸಚಿವನಾಗಿ ಇಲಾಖೆ ಅಭಿವೃದ್ಧಿಗೆ ಸಾಕಷ್ಟು ಯೋಚನೆಗಳಿವೆ. ಆದರೆ, ಸಮಯ ಕಡಿಮೆ ಇರುವುದರಿಂದ ಈ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.  ಹೂಗಳಿಂದ ನಿರ್ಮಿಸಿರುವ ಮರಿಗೌಡರ ಸ್ಮಾರಕ, ಸಂಸತ್‍ಭವನ ಎಲ್ಲವೂ ಸುಂದರ ವಾಗಿ ಮೂಡಿಬಂದಿದೆ. ನಾನು ಮಣ್ಣಿನ ಮಗ. ನನಗೆ ಈ ಫಲಪುಷ್ಪ ಪ್ರದರ್ಶನ ಖುಷಿ ಕೊಟ್ಟಿದೆ ಎಂದು ನುಡಿದರು. ತೇಜಸ್ವಿನಿ ಅನಂತ್‍ಕುಮಾರ್ ಮಾತನಾಡಿ, ನನ್ನ ಪತಿ ಸಂಸತ್ ಭವನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಆ ಸಂಸತ್ ಭವನವನ್ನು ಸಸ್ಯಕಾಶಿಯಲ್ಲಿ ಪುಷ್ಪಗಳಿಂದ ನಿರ್ಮಿಸಿರುವುದು ನೋಡಲು ಸಂತಸ ಮೂಡಿಸುತ್ತದೆ ಎಂದು ಹೇಳಿದರು. ಮನೆ ಹತ್ತಿರವೇ ಲಾಲ್‍ಬಾಗ್ ಇರುವುದರಿಂದ ಆಗಾಗ ನಾನು ಮತ್ತು ನನ್ನ ಪತಿ ಇಲ್ಲಿಗೆ ಬರುತ್ತಿರುತ್ತೇವೆ ಎಂದರು.
ಸಚಿವರ ಸೆಲ್ಫಿ:

Kabban-2

ಇದೇ ಸಂದರ್ಭದಲ್ಲಿ ಸಚಿವ ಮಲ್ಲಿಕಾರ್ಜುನ್ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.  ವಿದೇಶಿಗರು ಸೇರಿದಂತೆ ಸಾವಿರಾರು ಮಂದಿ ಇಂದಿನಿಂದ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ಪುಷ್ಪಗಳ ಸೌಂದರ್ಯ ಸವಿದರು. ಇಂದಿನಿಂದ  ಆಗಸ್ಟ್ 15ರವರೆಗೂ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಪುಷ್ಪಗಳು ಕಳೆಗುಂದದಂತೆ ಈ ಬಾರಿ ವಿಶೇಷ ಎಚ್ಚರಿಕೆ ವಹಿಸಲಾಗಿದೆ.  ಸ್ಪ್ರಿಂಕ್ಲರ್ ಮೂಲಕ ಹೂವಿಗೆ ನೀರು ಚಿಮುಕಿಸುವಂತಹ ವ್ಯವಸ್ಥೆ ಮಾಡ ಲಾಗಿದ್ದು, ಇದರಿಂದ ಅಷ್ಟೂ ದಿನಗಳು ಹೂವು ತನ್ನ ತಾಜಾತನ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.

Facebook Comments

Sri Raghav

Admin