ಕಬ್ಬಿನ ಗದ್ದೆಯಲ್ಲಿ 3 ಚಿರತೆ ಮರಿಗಳು ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

27 KRP- --babck page

ಕೆ.ಆರ್.ಪೇಟೆ, ಆ.28- ಕಬ್ಬು ಕಟಾವು ಮಾಡುವಾಗ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪ್ರತ್ಯಕ್ಷಗೊಂಡಿದ್ದು ತಾಲೂಕಿನ ಮೂಡನಹಳ್ಳಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮದ ಕೆಂಪೇಗೌಡ ಅವರ ಮಗ ಕರೀಗೌಡ ಎಂಬುವವರ ಕಬ್ಬಿನ ಗದ್ದೆಯಲ್ಲಿ ಐಸಿಎಲ್ ಸಕ್ಕರೆ ಕಾರ್ಖಾನೆಯ ಕಬ್ಬು ಕಟಾವು ಕಾರ್ಮಿಕರು ಕಟಾವು ಕೆಲಸದಲ್ಲಿ ನಿರತಾಗಿದ್ದಾಗ ಚಿರತೆ ಮರಿಗಳು ಪ್ರತ್ಯಕ್ಷಗೊಂಡಿದ್ದು ಗ್ರಾಮಸ್ಥರಲ್ಲಿ ಭಯದ ವಾತಾವರಣವನ್ನು ಸೃಷ್ಠಿಸಿದೆ.
ತಕ್ಷಣ ಕಬ್ಬು ಕಟಾವು ಮಾಡುವವರು ಭಯಭೀತರಾಗಿ ಗದ್ದೆಯಿಂದ ಹೊರ ಬಂದು ಗದ್ದೆಯ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ.

ವಿಷಯ ತಿಳಿದ ಅರಣ್ಯ ಇಲಾಖೆಯ ನೌಕರರು ಸ್ಥಳಕ್ಕೆ ಬಂದು ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ. ಗದ್ದೆಯಲ್ಲಿ ಮರಿಗಳು ಪತ್ತೆಯಾಗಿರುವ ಹಿನ್ನಲೆ ತಾಯಿ ಚಿರತೆ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮರಿಗಳನ್ನು ತಾಯಿ ಬಳಿ ತಲುಪಿಸಲು ಇಲಾಖೆ ನೌಕರರು ಕಾರ್ಯ ಪ್ರವೃತ್ತರಾಗಿದ್ದಾರೆ. ತಾಯಿ ಚಿರತೆ ಹಿಡಿಯುವಂತೆ ಗ್ರಾಮದ ಹಿರಿಯ ಮುಖಂಡ ರಂಗಸ್ವಾಮಿ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Facebook Comments

Sri Raghav

Admin