ಕಬ್ಬು ಬೆಳೆಗಾರರ ಬಾಕಿ ಹಣ ದೊರಕಿಸಿಕೊಡುವಂತೆ ಸಿಎಂ ಹೆಚ್’ಡಿಕೆಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

kuaburu-shantakumar

ತಿ.ನರಸೀಪುರ, ಮೇ 23- ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಸುಮಾರು 2 ಸಾವಿರ ಕೋಟಿ ರೂಗಳ ಬಾಕಿ ಹಣವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತ್ವರಿತಗತಿಯಲ್ಲಿ ದೊರಕಿಸಿಕೊಡಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು. ತಾಲ್ಲೂಕಿನ ಶಂಭುದೇವನಪುರ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ರೈತರ ಬೆಳೆಗಳಿಗೆ ನೀರು ಕೊಡದ ಪರಿಣಾಮ ರಾಜ್ಯದ ರೈತರು ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ನಿಟ್ಟಿನಲ್ಲಿ ರೈತರು ಈ ಬಾರಿ ಹೊಸ ಬದಲಾವಣೆಯನ್ನು ಬಯಸಿ ನೂತನ ಸರ್ಕಾರಗಳಿಗೆ ತಮ್ಮ ಬೆಂಬಲ ನೀಡುವ ಮುಖಾಂತರ ರೈತರ ವಿವಿಧ ಬ್ಯಾಂಕ್‍ಗಳ ಸಾಲಮನ್ನಾ ಆಗಲಿದೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ.

ಈ ನಿಟ್ಟಿನಲ್ಲಿ ಎಚ್‍ಡಿಕೆರವರು ರೈತರ ಎಲ್ಲಾ ಬ್ಯಾಂಕ್‍ಗಳ ಸಾಲವನ್ನು ಮನ್ನಾ ಮಾಡಿ ರೈತರನ್ನು ರಕ್ಷಿಸುವಂತೆ ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್ ಮಾತನಾಡಿ, ರೈತರು ಸಂಘಟಿತರಾಗಿ ಹೋರಾಟ ನಡೆಸುವ ಮೂಲಕ ತಮಗೆ ಸಿಗಬೇಕಾದ ನ್ಯಾಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ತಾಲ್ಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಮುಖಂಡರಾದ ಅತ್ತಹಳ್ಳಿ ದೇವರಾಜು, ಕಿರಗಸೂರು ಶಂಕರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಹಾಡ್ಯರವಿ, ಬಿ.ಪಿ.ಪರಶಿವಮೂರ್ತಿ, ನಂಜುಂಡಸ್ವಾಮಿ, ರವೀಶ್, ಶಿವರುದ್ರಸ್ವಾಮಿ, ಮಹದೇವಪ್ಪ ಇತರರು ಇದ್ದರು.

Facebook Comments

Sri Raghav

Admin