‘ಕಮರೊಟ್ಟು ಚೆಕ್‍ಫೋಸ್ಟ್’ ನಲ್ಲಿ ಸಕ್ಸಸ್ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಕುತೂಹಲಕಾರಿ ಹಾರರ್ ಸಬ್ಜೆಕ್ಟ್ ಒಳಗೊಂಡ ಚಿತ್ರ ಕಮರೊಟ್ಟು ಚೆಕ್‍ಫೋಸ್ಟ್ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ಮಾಮ ಟೀ ಅಂಗಡಿ ಖ್ಯಾತಿಯ ಪರಮೇಶ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಕೂಡ ಕೇಳಿಬಂದಿತ್ತು. ಹಾಗಾಗಿ ಚಿತ್ರದ ಕಲೆಕ್ಷನ್ ಬಗ್ಗೆ ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

ನಿರ್ದೇಶಕ ಪರಮೇಶ್ ಮಾತನಾಡುತ್ತ ಹೊಸಬರ ಚಿತ್ರಕ್ಕೆ ಇಷ್ಟೊಂದು ಉತ್ತಮ ಪ್ರತಿಕ್ರಿಯೆ ಬರುತ್ತಿರುವುದು ನಮಗೆ ಖುಷಿ ತಂದಿದೆ. ಎಲ್ಲರೂ ಸೆಕೆಂಡ್ ಹಾಫ್ ನಮ್ಮನ್ನು ಕಾಡುತ್ತೆ ಎಂದು ಹೇಳಿದ್ದಾರೆ. ರಿಲೀಸಾದ ನಂತರ ಚಿತ್ರದ ಕಲೆಕ್ಷನ್ ಹಂತಹಂತವಾಗಿ ಜಾಸ್ತಿಯಾಗುತ್ತಲೇ ಹೋಗುತ್ತಿದೆ.

ಮಾಲ್‍ಗಳಲ್ಲಿ ಶೇ.70ರವರೆಗೆ ಕಲೆಕ್ಷನ್ ಬಂದಿದೆ. ವೀರೇಶ್ ಚಿತ್ರಮಂದಿರದಲ್ಲಿ ರಾತ್ರಿ 10 ಗಂಟೆ ಪ್ರದರ್ಶನ ಕೂಡ ಹೌಸ್‍ಫುಲ್ ಆಗಿತ್ತು. ಭಾನುವಾರ ಮಳೆ ಇದ್ದರೂ ಶೇ.65ರಷ್ಟು ಗಳಿಕೆ ಬಂದಿತ್ತು. ತುಮಕೂರಿನಲ್ಲಿ ಮೊದಲ 2 ಶೋ ಇತ್ತು. ಈಗ 4 ಶೋ ಕೊಟ್ಟಿದ್ದಾರೆ. ಬಹುತೇಕ ಸೆಂಟರ್‍ಗಳಲ್ಲಿ ಹೊಸದಾಗಿ ಥಿಯೇಟರ್‍ಜಾಸ್ತಿಯಾಗಿದೆ.

ನಾರ್ಮಲ್ ಸಬ್ಜೆಕ್ಟ್‍ಗಿಂತ ವಿಶೇಷವಾದ ಸಿನಿಮಾ ಮಾಡಬೇಕೆಂಬ ಆಸೆ ಚಿಗುರಿದೆ ಎಂದು ಹೇಳಿದರು. ನಿರ್ಮಾಪಕ ಚೇತನ್‍ರಾಜ್ ಮಾತನಾಡಿ, ಯಾವ ಥಿಯೇಟರ್‍ನಲ್ಲೂ ಕಲೆಕ್ಷನ್ ಡ್ರಾಪ್ ಆಗಿಲ್ಲ. ಸೋಮವಾರವೂ ಕಲೆಕ್ಷನ್ ಸ್ಥಿರವಾಗಿಯೇ ಇರುವುದು ಚಿತ್ರದ ಸಕ್ಸಸ್ ಆದ ಹಾಗೆ. ತಂಡದ ಸಹಕಾರದಿಂದ ಈ ಸಕ್ಸಸ್ ಸಿಕ್ಕಿದೆ ಎಂದು ಹೇಳಿದರು.

ನಟ ಉತ್ಪಲ್ ಮಾತನಾಡಿ, ಈ ಥರದ ಯಶಸ್ಸು ಸಿಗುತ್ತೆ ಅಂದ್ಕೊಂಡಿರಲಿಲ್ಲ. ಆರಂಭದಲ್ಲಿ ತಪ್ಪಿ ಹೋಗಿದ್ದ ಅವಕಾಶ ನನಗೆ ಮತ್ತೆ ಸಿಕ್ತು. ನಿರ್ಮಾಪಕರು ಫ್ರೆಂಡ್ ಥರ ಇದ್ದಾರೆ. ವೀಕ್ಷಕರು ಫಸ್ಟ್ ಹಾಫ್‍ನಲ್ಲಿ ನಗ್ತಾ ಎಂಜಾಮ್ ಮಾಡಿದರೆ, ಸೆಕೆಂಡ್‍ಹಾಫ್‍ನಲ್ಲಿ ಅಷ್ಟೇ ಸೀರಿಯಸ್ ಆಗಿರ್ತಾರೆ ಎಂದು ಹೇಳಿದರು. ನಾಯಕ ಸನತ್, ನಾಯಕಿ ಸ್ವಾತಿ ಕೊಂಡೆ, ಸಹನಿರ್ದೇಶಕ ರಾಜೇಶ್ ಮಾತನಾಡಿ,ಸಕ್ಸಸ್ ಬಗ್ಗೆ ಖುಷಿ ಹಂಚಿಕೊಂಡರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ