ಕಮ್ಮನಹಳ್ಳಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಸಂತ್ರಸ್ತ ಯುವತಿ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Kammanahalli-Bengaluru--New

ಬೆಂಗಳೂರು,ಜ.6- ಕೃತ್ಯ ಎಸಗಿದ ಆರೋಪಿಗಳಿಬ್ಬರನ್ನು ಮಾತ್ರ ನಾನು ನೋಡಿದ್ದೇನೆ ಎಂದು ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ಇಂದು ಯುವತಿಯ ಮನೆಗೆ ತೆರಳಿದ ಮಹಿಳಾ ಅಧಿಕಾರಿಗಳು ಸಂತ್ರಸ್ತೆಯಿಂದ ಘಟನೆ ಕುರಿತ ಸಂಪೂರ್ಣ ಮಾಹಿತಿಯ ಹೇಳಿಕೆಯನ್ನು ಪಡೆದುಕೊಂಡರು. ಮಾಹಿತಿ ನೀಡುವ ವೇಳೆ ಯುವತಿ ಕೃತ್ಯ ಎಸಗಿದ ಇಬ್ಬರನ್ನು ಮಾತ್ರ ನೋಡಿದ್ದೇನೆ. ಉಳಿದ ನಾಲ್ವರ ಗುರುತು ನನಗೆ ತಿಳಿದಿಲ್ಲ ಎಂದಿದ್ದಾರೆ. ಈ ಯುವಕರಿಗೂ ತನಗೂ ಹಿಂದೆ ಯಾವುದೇ ಪರಿಚಯವಿಲ್ಲ ಎಂದು ಯುವತಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾಳೆ.

ಮಾಧ್ಯಮಗಳಲ್ಲಿ ಘಟನೆ ವರದಿಯಾಗುತ್ತಿದ್ದಂತೆ ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಸಂತ್ರಸ್ತೆಯನ್ನು ಪತ್ತೆಹಚ್ಚಿದ ಮಹಿಳಾ ಪೊಲೀಸ್ ಅಧಿಕಾರಿಗಳು ಆಕೆಯ ಮನವೊಲಿಸಿ ಠಾಣೆಗೆ ಕರೆಸಿಕೊಂಡು ಆರೋಪಿಗಳ ಗುರುತು ಪತ್ತೆ ಹಚ್ಚಿದ್ದರು.

ಮುಂದುವರೆದ ವಿಚಾರಣೆ:

ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬಂಧಿತ ನಾಲ್ವರ ತೀವ್ರ ವಿಚಾರಣೆ ಮುಂದುವರೆದಿದೆ. ಬಂಧಿತರನ್ನು ನಿನ್ನೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಜ.10ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸ್ ವಶದಲ್ಲಿರುವ ಪ್ರಮುಖ ಆರೋಪಿ ಲೆನೋ, ಅಯ್ಯಪ್ಪ, ಸುದೇಶ್ ಮತ್ತು ಸೋಮಶೇಖರ್‍ನನ್ನು ಬಾಣಸವಾಡಿ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin