ಕರಡಿ ದಾಳಿ : ರೈತನಿಗೆ ತೀವ್ರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗೇಪಲ್ಲಿ, ನ.29-ಹಸು ಮೇಯಿಸಲು ಹೋಗಿದ್ದ ರೈತನೊಬ್ಬನ ಮೇಲೆ ಕರಡಿ ದಾಳಿ ಮಾಡಿ ತೀವ್ರಗೊಳಿಸಿರುವ ಘಟನೆ ತಾಲ್ಲೂಕಿನ ಜೂಲಪಾಳ್ಯ ಗ್ರಾಪಂ ವ್ಯಾಪ್ತಿಯ ಶ್ರೀಧರವಾರಿಪಲ್ಲಿ ಗ್ರಾಮದ ಬಳಿ ನಡೆದಿದೆ.ಗ್ರಾಮದ ರೈತ ನಾರಾಯಣಪ್ಪ ಕರಡಿ ದಾಳಿಯಿಂದ ಗಾಯಗೊಂಡಿದ್ದಾರೆ. ಗ್ರಾಮದ ಹೊರಭಾಗದಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ಹಠಾತ್ತಾಗಿ ಕರಡಿಯೊಂದು ಈತನ ಮೇಲೆ ದಾಳಿ ನಡೆಸಿದ್ದು, ಗಾಬರಿಗೊಂಡು ಕೂಗಿಕೊಂಡಾಗ ಸುತ್ತಮುತ್ತಲ್ಲಿದ್ದ ರೈತರು ಕರಡಿಯಿಂದ ಆತನನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾರಾಯಣಪ್ಪನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin