ಕರವೇ ಕಾರ್ಯಕರ್ತರು ಹಾಸನ ಯಗಚಿ ಜಲಾಶಯದ ನೀರು ಹರಿಸುವುದನ್ನು ವಿರೋಧಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಮಾ.2-ಪಟ್ಟಣ ಸಮೀಪದ ಯಗಚಿ ಜಲಾಶಯದಿಂದ ಹಾಸನಕ್ಕೆ ನೀರು ಬಿಡುತ್ತಿರುವುದನ್ನು ಖಂಡಿಸಿ ಶಾಸಕ ವೈ.ಎನ್.ರುದ್ರೇಶ್‍ಗೌಡರ ಮನೆಗೆ ರೈತ ಸಂಘ ಹಾಗೂ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ತಕ್ಷಣವೆ ನೀರು ನಿಲ್ಲಿಸುವಂತೆ ಒತ್ತಾಯಿಸಲಾಯಿತು.ಈ ವೇಳೆ ಮಾತನಾಡಿದ ರೈತ ಸಂಘದ ಬಳ್ಳೂರು ಸ್ವಾಮಿಗೌಡ, ಯಗಚಿ ಜಲಾಶಯದ ನೀರಿನ ಸಾಮಥ್ರ್ಯ ಕಡಿಮೆ ಇರುವುದರಿಂದ ಪಟ್ಟಣದ ಜನರಿಗೆ ಕುಡಿಯಲು ನೀರಿಲ್ಲ. ಅಲ್ಲದೆ ಭೀಕರ ಬರಗಾಲಕ್ಕೆ ತಾಲೂಕಿನ ಹಳೇಬೀಡು ಮಾದಿಹಳ್ಳಿ ಹೋಬಳಿ ಜನರು ತತ್ತರಿಸಿದ್ದಾರೆ. ಆದರೆ ಈ ಭಾಗಕ್ಕೆ ಇಲ್ಲಿನ ಜಲಾಶಯದಿಂದ ನೀರು ಕೊಡಲು ಮುಂದಾಗದ ಅಧಿಕಾರಿಗಳು ಹಾಸನಕ್ಕೆ ನೀರು ಹರಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹಾಸನಕ್ಕೆ ನೀರು ಕೊಡುವದಾದರೆ ತಾಲೂಕಿನ ಹಳೇಬೀಡು ಹಾಗೂ ಮಾದಿಹಳ್ಳಿ ಹೋಬಳಿಗಳಿಗೂ ನೀರು ಕೊಡಿ. ಜಲಾಶಯದಲ್ಲಿ ನೀರಿಲ್ಲದಿದ್ದರೂ ಮೇಲಿನವರ ಒತ್ತಡಕ್ಕೆ ಮಣಿದು ಸುಳ್ಳು ಮಾಹಿತಿ ಕೊಟ್ಟು ಅಧಿಕಾರಿಗಳು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇನ್ನೂ 15 ದಿನ ನೀರು ಬಿಟ್ಟರೆ ಜಲಾಶಯ ಸಂಪೂರ್ಣ ಖಾಲಿಯಾಗಲಿದೆ. ಆದರೆ ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ನೀರು ಬಿಡಲಾಗುತ್ತಿದೆ. ತಕ್ಷಣವೆ ಬಿಡುತ್ತಿರುವ ನೀರನ್ನು ನಿಲ್ಲಸಬೇಕು. ಇಲ್ಲದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೆ ಜವಬ್ದಾರರಾಗುತ್ತಾರೆ ಎಂದು ಎಚ್ಚರಿಸಿದರು.ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಜಲಾಶಯದಿಂದ ನೀರು ಬಿಡುತ್ತಿರುವುದು ನದಿಯಲ್ಲಿನ ಗುಂಡಿಗಳು ತುಂಬಲು ಸಾಕಾಗುತ್ತಿಲ್ಲ. ಇನ್ನೂ ಅಲುವಾಗಿಲು ಪಿಕಪ್ ಮುಟ್ಟುತ್ತದೆಯೆ. ಇಲ್ಲಿನ ನದಿಯಲ್ಲಿ ಮರಳು ದಂಧೆಕೋರರು 20 ಅಡಿಗಳಿಗೂ ಹೆಚ್ಚು ಗುಂಡಿಗಳನ್ನು ತೆಗೆದು ಮರಳನ್ನು ಲೂಟಿ ಮಾಡಿರುವುದರಿಂದ ನೀರೆಲ್ಲ ಗುಂಡಿಗಳಲ್ಲೆ ತುಂಬಿಕೊಳ್ಳುತ್ತಿದೆ. ಜಲಾಶಯದಿಂದ ಬಿಡುತ್ತಿರುವ ನೀರು ಸಾಕಾಗುವುದಿಲ್ಲ. ಜಲಾಶಯದಲ್ಲಿ ನೀರು ಖಾಲಿಯಾಗುತ್ತದೆ ಅಷ್ಟೇ ಎಂದರು.

ಮನವಿ ಆಲಿಸಿ ಮಾತನಾಡಿದ ಶಾಸಕ ವೈ.ಎನ್.ರುದ್ರೇಶ್‍ಗೌಡ, ಜಲಾಶಯದಿಂದ ಬಿಟ್ಟಿರುವ ನೀರನ್ನು ನಿಲ್ಲಿಸುವಂತೆ ರೀಜಿನಲ್ ಕಮಿಷನರ್ ಹಾಗೂ ಹಾಸನ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರೆ ಅವರು ಜಲಾಶಯದಲ್ಲಿ ನೀರಿದೆ ಹಾಸನಕ್ಕೆ ನೀರು ಕೊಡಬೇಕು ಎಂದು ಹೇಳಿದರೆ, ಜಿಲ್ಲಾಧಿಕಾರಿಗಳು ಜಲಾಶಯದ ನೀರಿನ ವಿಷಯ ನಮಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಆದರೆ ನೀರು ಬಿಡುವ ವಿಚಾರವಾಗಿ ಸಭೆ ನಡೆದಿದೆ. ಅದನ್ನು ಶಾಸಕನಾದ ನನ್ನ ಗಮನಕ್ಕೆ ತಂದಿಲ್ಲ. ಅಲ್ಲದೆ ಜಲಾಶಯದಿಂದ ನೀರು ಬಿಡಬೇಕೆಂದು ಯಾವುದೆ ಅಗ್ರಿಮೆಂಟ್ ಹಾಗೂ ದಾಖಲೆಗಳಿಲ್ಲ. ಮತ್ತೊಮ್ಮೆ ಚರ್ಚಿಸುವುದಕ್ಕೆ ಸಭೆ ಕರೆಯಿರಿ. ನೀರನ್ನು ನಿಲ್ಲಿಸದಿದ್ದಲ್ಲಿ ದೊಡ್ಡ ಅನಹುತವೇನಾದರೂ ಆದರೆ ಜವಬ್ದಾರರು ನಾವಲ್ಲ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin