ಕರಾಚಿಯಲ್ಲಿ ಹಿಂದೂ ವೈದ್ಯನ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

adfgGDSG

ಕರಾಚಿ, ಆ.6-ಪಾಕಿಸ್ತಾನದ ವಿವಿಧೆಡೆ ಹಿಂದೂಗಳು ಮತ್ತು ಭಾರತೀಯ ಮೂಲದ ನಾಗರಿಕರ ಮೇಲೆ ಹಿಂಸಾಚಾರ, ಹತ್ಯೆ ಮುಂದುವರೆದಿದ್ದು, ಹಿಂದೂ ವೈದ್ಯರೊಬ್ಬರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಬಂದರು ನಗರಿಯ ಪಾಕ್ ಕಾಲೋನಿಯ ಬಾರಾ ರಸ್ತೆಯಲ್ಲಿನ ತಮ್ಮ ಕ್ಲಿನಿಕ್ ಮುಂದೆಯೇ 56 ವರ್ಷದ ಡಾ.ಪ್ರೀತಂ ಲಖ್ವಾನಿ ಅವರ ಎದೆಗೆ ಗುರುವಾರ ಗುಂಡು ಹಾರಿಸಲಾಗಿತ್ತು. ತೀವ್ರ ರಕ್ತಸ್ರಾವಕ್ಕೆ ಒಳಗಾದ ಅವರನ್ನು ಅಬ್ಬಾಸಿ ಸಯೀದ್ ಆಸ್ಪತ್ರೆಗೆ, ಆನಂತರ ಅಘಾಖಾನ್ ಹಾಸ್ಪಿಟಲ್‍ಗೆ ಸ್ಥಳಾಂತರಿಸಲು ಶುಕ್ರವಾರ ಅವರು ಕೊನೆಯುಸಿರೆಳೆದರು.  ಇದೊಂದು ಧಾರ್ಮಿಕ ಉದ್ದೇಶದ ಕಗ್ಗೊಲೆ ಎಂದು ಸ್ಥಳೀಯ ಹಿಂದೂಗಳು ಬಣ್ಣಿಸಿದ್ದಾರೆ. ಇತ್ತೀಚೆಗೆ ಇದೇ ನಗರದ ಅಬ್ಬಾಸ್ ಪಟ್ಟಣದಲ್ಲಿ ನಡೆದ ಅಕ್ರಮಣದಲ್ಲಿ ಹಿಂದೂ ಸಮುದಾಯದ ಮೂವರು ಹತರಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments

Sri Raghav

Admin