ಕರಾವಳಿಯಲ್ಲಿ ಕಮಲ ಪಡೆಯಿಂದ ‘ಮಂಗಳೂರು ಚಲೋ’ ರ‍್ಯಾಲಿ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

Mangaluru-Chalo--01

ಮಂಗಳೂರು. ಸೆ.07 : ಬಿಜೆಪಿ ಯುವಮೋರ್ಚಾ ಗುರುವಾರ ನಡೆಸುತ್ತಿರುವ ಮಂಗಳೂರು ಚಲೋ ರ‍್ಯಾಲಿಗೆ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ನಗರದ ಜ್ಯೋತಿ ಸರ್ಕಲ್ನಲ್ಲಿ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣಗೆಗಳನ್ನು ಕೂಗುತ್ತಿದ್ದಾರೆ. ತೊಲಗಲಿ ತೊಲಗಲಿ ಹಿಂದೂ ವಿರೋಧಿ ಸರ್ಕಾರ ತೊಲಗಲಿ ಎನ್ನುವ ಘೋಷಣೆಗಳು ಕೇಳಿ ಬರುತ್ತಿವೆ. ಜ್ಯೋತಿ ಸರ್ಕಲ್ನಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು,ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ನಗರ ಪ್ರವೇಶಿಸುವ ಪ್ರತಿಯೊಂದು ರಸ್ತೆಗಳಲ್ಲೂ ಪೊಲೀಸರಿಂದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ನಡೆಸದಂತೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗು ಪೊಲೀಸರ ನಡುವೆ ವಾಗ್ವಾದ ನಡೆಯಿತು.

Jyothi Circle 15

ಮಂಗಳೂರಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರ್ಭಟಿಸಿದ ಬಿಜೆಪಿ ನಾಯಕರು  : 
ಮಂಗಳೂರು, ಸೆ.7- ಸಮಾಜಘಾತುಕರನ್ನು ರಕ್ಷಿಸಿ ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವಂತಹ ಹಿಟ್ಲರ್ ಸಂಸ್ಕøತಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ನಡೆಸುತ್ತಿದೆ ಎಂದು ಬಿಜೆಪಿ ನಾಯಕರು ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ಚಲೋ ಸಮಾವೇಶದಲ್ಲಿ ಬೈಕ್ ರ್ಯಾಲಿಗೂ ಮುನ್ನ ಇಲ್ಲಿನ ಜ್ಯೋತಿ ಸರ್ಕಲ್ ಬಳಿ ಜಮಾವಣೆಗೊಂಡಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿನಿಂದಲೇ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯುವ ಸಂಕಲ್ಪ ತೊಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿ ರಣಕಹಳೆ ಮೊಳಗಿಸಿದ್ದಾರೆ.
ಪೊಲೀಸರನ್ನು ಬಳಸಿಕೊಂಡು ಹೋರಾಟವನ್ನು ಹತ್ತಿಕ್ಕಲಾಗಿದೆ. ಇಲ್ಲ ಸಲ್ಲದ ಕಾನೂನುಗಳನ್ನು ತಂದು ದಬ್ಬಾಳಿಕೆ ಮಾಡಲಾಗಿದೆ. ನಿನ್ನೆ ನಡೆದ ಹೋರಾಟದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಥಳಿಸಲಾಗಿದೆ. ಇದು ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Jyothi Circle 18

ಭ್ರಷ್ಟಾಚಾರ, ದ್ವೇಷದ ರಾಜಕಾರಣ ಮತ್ತು ಸಮಾಜವನ್ನು ಒಡೆಯುವಂತಹ ನೀತಿಯನ್ನು ಸರ್ಕಾರ ನಡೆಸುತ್ತಿದೆ. ರಾಜ್ಯದಲ್ಲಿ ಅಧಿಕಾರಿಗಳು, ಜನತೆ ಭಯದಿಂದ ಬದುಕುವಂತಹ ಪರಿಸ್ಥಿತಿ ಉದ್ಭವವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಟೀಕಿಸಿದರು. ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕರಾವಳಿ ಹಾಗೂ ರಾಜ್ಯದ ವಿವಿಧೆಡೆ ಸಂಘ ಪರಿವಾರದ ಕಾರ್ಯಕರ್ತರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದಕ್ಕೆ ಇಲ್ಲಿನ ಎಸ್‍ಡಿಪಿಐಆರ್, ಪಿಎಫ್‍ಐ ಸಂಘಟನೆಗಳು ಸಹಕಾರಿಯಾಗಿರುವುದು ಗೊತ್ತಿದ್ದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಲಾಗುತ್ತಿದೆ. ರಾಜ್ಯ ಸಚಿವ ಸಂಪುಟದಲ್ಲಿ ಗಂಭೀರ ಆರೋಪಗಳನ್ನು ಹೊತ್ತಿರುವ ಈ ಸಂಘಟನೆಯ ಕಾರ್ಯಕರ್ತರ ಮೇಲಿದ್ದ ಕೇಸ್‍ಗಳನ್ನು ವಾಪಸ್ ಪಡೆಯಲಾಗಿದೆ. ಇದು ಕಾಂಗ್ರೆಸ್ ಸರ್ಕಾರ ಯಾವ ರೀತಿ ಜನರಿಗೆ ಭದ್ರತೆ ನೀಡುತ್ತಿದೆ ಎಂಬುದು ತೋರಿಸುತ್ತದೆ ಎಂದು ಟೀಕಿಸಿದರು.

Jyothi Circle 17

ಸಂಸದ ನವೀನ್ ಕುಮಾರ್ ಕಟೀಲ್ ಮಾತನಾಡಿ, ಮಂಗಳೂರು ಚಲೋ ಕಾರ್ಯಕ್ರಮ ಕರಾವಳಿ ಜನತೆಗೆ ಭದ್ರತೆಯ ವಿಶ್ವಾಸ ಮೂಡಿಸುವಂತಹ ಕಾರ್ಯ. ಆದರೆ ಸರ್ಕಾರ ಇದನ್ನು ಬೇರೆ ರೀತಿ ವ್ಯಾಖ್ಯಾನಿಸಿ ನಮ್ಮ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕುವಂತಹ ಪ್ರಯತ್ನ ನಡೆಸಲಾಗಿದೆ. ಆದರೂ ಇಲ್ಲಿ ನೆರೆದಿರುವ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ನಮ್ಮ ಬಲವನ್ನು ತೋರಿಸಿದ್ದಾರೆ. ನಾವು ಅಧರ್ಮದ ವಿರುದ್ಧ ಹೋರಾಟ ಮುಂದುವರೆಸೋಣ ಎಂದು ಹೇಳಿದರು.

Jyothi Circle 13

ಸಮಾವೇಶದಲ್ಲಿ ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಶಾಸಕರಾದ ಅರವಿಂದ ಲಿಂಬಾವಳಿ, ಆರ್.ಅಶೋಕ್ ಸೇರಿದಂತೆ ಘಟಾನುಘಟಿ ಬಿಜೆಪಿ ನಾಯಕರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.  ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಮೊಳಗಿಸಿದರು. ನಂತರ ನೆಹರು ಮೈದಾನದತ್ತ ಸಾಗುವಾಗ ಪೊಲೀಸರು ಮೆರವಣಿಗೆ ಹೋಗದಂತೆ ತಡೆ ಹಿಡಿದರು. ಆಗ ಪರಿಸ್ಥಿತಿ ಕೆಲ ಕಾಲ ಉದ್ವಿಗ್ನವಾಗಿತ್ತು.

Jyothi Circle

 

Jyothi Circle 1

Jyothi Circle 4

Jyothi Circle 6

 

Jyothi Circle 8

Jyothi Circle 9

Jyothi Circle 10 Jyothi Circle

Mangaluru-Chalo--02

Mangaluru-Chalo--03

Facebook Comments

Sri Raghav

Admin