ಕರಾವಳಿ ಭಾಗದ ಜನರ ನಿವೇಶನ ಸಮಸ್ಯೆ ಪರಿಹಾರವೇ ಮೊದಲ ಆದ್ಯತೆ : ಕಾಗೋಡು

ಈ ಸುದ್ದಿಯನ್ನು ಶೇರ್ ಮಾಡಿ
ಮಲೆನಾಡ ಮಿತ್ರ ವೃಂದದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ನೂತನ ಅಂತರ್ಜಾಲವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೆ.ವಿಶ್ವನಾಥ್ , ಎಚ್.ಎಸ್.ಮಂಜುನಾಥ್, ಎಚ್.ವಿ.ಲಕ್ಷ್ಮಣರಾವ್, ಕುಂಜೂರು ಹರೀಶ್ ಅವರಿಗೆ ಮಲೆನಾಡು ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಸಕ ಜೀವರಾಜ್, ವೃಂದದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ಕಾಂಗ್ರೆಸ್ ಮುಖಂಡ ಟಿ.ಡಿ.ರಾಜೇಗೌಡ ಮತ್ತಿತರರು ಪಾಲ್ಗೊಂಡಿದ್ದರು.
ಮಲೆನಾಡ ಮಿತ್ರ ವೃಂದದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ನೂತನ ಅಂತರ್ಜಾಲವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೆ.ವಿಶ್ವನಾಥ್ , ಎಚ್.ಎಸ್.ಮಂಜುನಾಥ್, ಎಚ್.ವಿ.ಲಕ್ಷ್ಮಣರಾವ್, ಕುಂಜೂರು ಹರೀಶ್ ಅವರಿಗೆ ಮಲೆನಾಡು ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಸಕ ಜೀವರಾಜ್, ವೃಂದದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ಕಾಂಗ್ರೆಸ್ ಮುಖಂಡ ಟಿ.ಡಿ.ರಾಜೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

 

ಬೆಂಗಳೂರು, ಸೆ.26-ಕರಾವಳಿ ಭಾಗದವರು ಎದುರಿಸುತ್ತಿರುವ ನಿವೇಶನ ವರ್ಗಾವಣೆ ಹಾಗೂ ಮಾರಾಟ ಸಮಸ್ಯೆಗೆ ಪರಿಹಾರ ಒದಗಿಸಲು ನಿರ್ಧರಿಸಿರುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಮಲೆನಾಡು ಮಿತ್ರವೃಂದ ಹಮ್ಮಿಕೊಂಡಿದ್ದ ಮಲೆನಾಡು ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಲೆನಾಡು ಹಾಗೂ ಕರಾವಳಿ ಪ್ರದೇಶದ ಭೂಮಿ ಸಮಸ್ಯೆ ನಿವಾರಿಸುವುದು ನನ್ನ ಮುಂದಿರುವ ಪ್ರಮುಖ ಕೆಲಸವಾಗಿದೆ. ಪ್ರತಿ ತಿಂಗಳು ವರದಿ ತರಿಸಿಕೊಂಡು ಪರಿಶೀಲಿಸುತ್ತಿದ್ದೇನೆ. ಈ ಸಮಸ್ಯೆ ಪರಿಹಾರಕ್ಕೆ ನಾವು ಪ್ರಯತ್ನಿಸ ದಿದ್ದಲ್ಲಿ ಮುಂದೆ ಅದು ಸಮಸ್ಯೆಯಾಗಿ ಉಳಿದು ಬಿಡುತ್ತದೆ. ಅರಣ್ಯ ಇಲಾಖೆಯವರಿಗೆ ಈ ಬಗ್ಗೆ ಹೆಚ್ಚಿನ ಅರಿವಿಲ್ಲದಿರುವುದು ದುರಂತ.

ಅರಣ್ಯ ಭೂಮಿ ವಿಚಾರದಲ್ಲಿ ಅಧಿಕಾರಿಗಳು ಅವರವರಿಗೆ ತಕ್ಕಂತೆ ಅರ್ಥ ಮಾಡಿಕೊಂಡಿದ್ದಾರೆ. ಸೊಪ್ಪಿನಬೆಟ್ಟ, ಕಾನು, ಜಮ್ಮ ಬಾಣೆಯಂತಹ ಪ್ರದೇಶಗಳನ್ನು ಅರಣ್ಯ ಪ್ರದೇಶಗಳೆಂದೇ ಪರಿಗಣಿಸಿದ್ದಾರೆ. ಈ ನೆಲೆ ನಿಂತಿರುವ ಜನರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಆಡಳಿತ ವರ್ಗದಲ್ಲಿ ಕÉಲಸ ನಿರ್ವಹಿಸುತ್ತಿರುವ ಡಿಸಿ, ಎಸಿಗಳಿಗೆ ಈ ಸಮಸ್ಯೆಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಹಾಗಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಶಾಸಕ ಜೀವರಾಜ್ ಮಾತನಾಡಿ, ಅರಣ್ಯ ಇಲಾಖೆ ಈಗ ಬೇಲಿ ಹಾಕಿರುವ ಪ್ರದೇಶ ದವರೆಗೆ ಅವಕಾಶ ನೀಡಿ, ಅದಕ್ಕಿಂತ ಒಂದು ಇಂಚು ಮುಂದೆ ವಿಸ್ತರಿಸಲು ಅವಕಾಶ ನೀಡಬೇಡಿ. ಮಲೆನಾಡಿನಲ್ಲಿ ಬಂದು ಏಕೆ ಅರಣ್ಯ ಇಲಾಖೆಯವರು ಪ್ಲ್ಯಾಂಟೇಶನ್ ಮಾಡುತ್ತಾರೆ. ಇಲ್ಲಿ ನೈಸರ್ಗಿಕ ಕಾಡು ಇದೆ ಎಂದ ಅವರು, ಮೊದಲು ಬಯಲು ಸೀಮೆ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಿ ಪಡಿಸಲಿ ಎಂದು ಹೇಳಿದರು. ಅಡಿಕೆ ಸುಲಿಯುವ ಯಂತ್ರ ಕಂಡು ಹಿಡಿದ ತೀರ್ಥಹಳ್ಳಿ ಕೆ.ವಿಶ್ವನಾಥ್, ಯುಪಿಎಸ್‍ಸಿ ಪರೀಕ್ಷೆಯಲ್ಲಿ 566ನೆ ರ್ಯಾಂಕ್ ಪಡೆದ ಶೃಂಗೇರಿ ಎಚ್.ಎಸ್.ಮಂಜುನಾಥ್, ಲಾವಣಿ ಗಾಯಕರಾದ ಕೊಪ್ಪದ ಕುಂಚೂರು ಹರೀಶ್, ಉದ್ದಿಮೆದಾರರಾದ ಮಾಸ್ತಿ ಕಟ್ಟೆಯ ಲಕ್ಷ್ಮಣ್‍ರಾವ್ ಮತ್ತು ಲಕ್ಷ್ಮಿ ದಂಪತಿಗೆ ಈ ಸಂದರ್ಭದಲ್ಲಿ ಮಲೆನಾಡು ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಲೆನಾಡು ಸಂಸ್ಕøತಿ ಸೇರಿದಂತೆ ಇನ್ನಿತರ ವಿಷಯಗಳ ಮಾಹಿತಿ ಒಳಗೊಂಡ ವೆಬ್‍ಸೈಟ್ (www.malenadu.com) ನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಮಲೆನಾಡು ಮಿತ್ರವೃಂದದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ಟಿ.ಡಿ.ರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin