ಕರುಣಾನಿಧಿ ಆರೋಗ್ಯ ಯೋಗಕ್ಷೇಮ ವಿಚಾರಿಸಲಿರುವ ರಾಹುಲ್‍ಗಾಂಧಿ

ಈ ಸುದ್ದಿಯನ್ನು ಶೇರ್ ಮಾಡಿ

Rahul-01

ಚೆನ್ನೈ, ಡಿ.17-ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಪರಮೋಚ್ಚ ನಾಯಕ ಡಾ. ಎಂ.ಕರುಣಾನಿಧಿ ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿ ಇಂದು ಚೆನ್ನೈನಲ್ಲಿುಸಿ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯ ವೈದ್ಯರಿಂದ ಅವರ ಆರೋಗ್ಯದ ಬಗ್ಗೆ ರಾಹುಲ್ ಮಾಹಿತಿ ಪಡೆದರು. ಕರುಣಾನಿಧಿ ಅವರ ಬಳಿ ಕೆಲ ಹೊತ್ತು ಇದ್ದ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.   ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಇಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಮಾರ್ಗ ಮಧ್ಯೆ ಅವರು ಚೆನ್ನೆಗೆ ಆಗಮಿಸಿದ್ದರು.

ರಜನಿ ಸಿನಿಮಾ ವೀಕ್ಷಣೆ : ಕರುಣಾನಿಧಿ ಅವರು ನಿನ್ನೆ ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಸೂಪರ್‍ಡ್ಯೂಪರ್ ಹಿಟ್ ಭಾಷಾ ಸಿನಿಮಾ ವೀಕ್ಷಿಸಿದ್ದಾರೆ.  ಗಂಟಲು ಮತ್ತು ಶ್ವಾಸಕೋಶ ಸೋಂಕಿನಿಂದ ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಗಂಟಲು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈಗ ಚೇತರಿಸಿಕೊಳ್ಳುತ್ತಿರುವ ಅವರು ನಿನ್ನೆ ತಮ್ಮ ಲ್ಯಾಪ್‍ಟಾಪ್‍ನಲ್ಲಿ ಭಾಷಾ ಚಿತ್ರವನ್ನು ವೀಕ್ಷಿಸಿದರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.  ಕರುಣಾನಿಧಿಯವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin