ಕರುಳ ಕುಡಿಯನ್ನೇ ತೊರೆದು ಪರಾರಿಯಾದ ಕಲ್ಲು ಹೃದಯದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

baby

ಕೆ.ಆರ್.ಪೇಟೆ, ಅ.27- ಸುಮಾರು ಒಂದು ತಿಂಗಳ ಹಸುಗೂಸನ್ನು ನಿಷ್ಕರುಣಿ ತಾಯಿಯೊಬ್ಬಳು ಪಟ್ಟಣದ ಎಸ್‍ಬಿಎಂ ಪಕ್ಕದ ಸೇತುವೆಯ ಮೇಲೆ ಮಲಗಿಸಿ ಪರಾರಿಯಾಗಿದ್ದು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ತಾಲೂಕು ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ಮತ್ತು ಉಪಾಧ್ಯಕ್ಷ ಸಾರಂಗಿ ಲಿಂಗರಾಜು, ಬೂಕಹಳ್ಳಿ ಹರೀಶ್ ಅವರು ಬ್ಯಾಂಕ್ ಕೆಲಸ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಬ್ಯಾಂಕ್ ಪಕ್ಕದಲ್ಲಿರುವ ಬೈಪಾಸ್ ರಸ್ತೆಯ ಸೇತುವೆ ಮೇಲೆ ಸುಮಾರು 25ವರ್ಷ ವಯಸ್ಸಿನ ಮಹಿಳೆಯೊಬ್ಬರು ಸುಮಾರು 1ತಿಂಗಳ ಗಂಡು ಮಗುವನ್ನು ಮಲಗಿಸಿ ಅಣ್ಣ ಮಗುವನ್ನು ನೋಡಿಕೊಳ್ಳುತ್ತಿರಿ ಬಸ್ ಸ್ಟಾಂಡಿನಲ್ಲಿ ಬ್ಯಾಗ್ ಇದೆ ಒಂದು ನಿಮಿಷದಲ್ಲಿ ತೆಗೆದುಕೊಂಡು ಬರುತ್ತೇನೆ ಎಂದು ಹೋದವಳು ವಾಪಸ್ ಬರಲಿಲ್ಲ.

ಲಿಂಗರಾಜು ಅವರು ಮಗುವನ್ನು ಪಾಲನೆ ಮಾಡಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ದೇವಕುಮಾರ್ ಅವರಿಗೆ ಹಸ್ತಾಂತರ ಮಾಡಿ ಮಗು ರಕ್ಷಣೆಗೆ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ನಳಿನಾ ಮತ್ತು ಮೇಲುಕೋಟೆ ಜನಪದ ಟ್ರಸ್ಟ್‍ನ ವಿಠ್ಠಲ್ ಅವರು ಮಗುವನ್ನು ವಶಕ್ಕೆ ಪಡೆದುಕೊಂಡು ಮೇಲುಕೋಟೆಯ ಜನಪದ ಟ್ರಸ್ಟ್‍ನ ಮಕ್ಕಳ ಪಾಲನಾ ಸಂಸ್ಥೆಗೆ ಹಸ್ತಾಂತರ ಮಾಡಿದರು. ಸಹಾಯಕ ಸಿಡಿಪಿಒ ಪುಟ್ಟಸ್ವಾಮಿ, ಪದ್ಮ, ಶಾಂತಮ್ಮ. ದಿಲ್‍ಶಾದ್‍ನದಾಫ್, ತಾಲೂಕು ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ಮತ್ತು ಉಪಾಧ್ಯಕ್ಷ ಸಾರಂಗಿ ಲಿಂಗರಾಜು, ಬೂಕಹಳ್ಳಿ ಹರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin