ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜ ಹೊಂದಲು ಸರ್ಕಾರ ನಿರ್ಧಾರ, ಸಮಿತಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

Karnataka-Flag--01

ಬೆಂಗಳೂರು, ಜು.18- ಒಂದೆಡೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರುವ ಮೂಲಕ ಪ್ರಾದೇಶಿಕ ಭಾಷೆಗಳ ಅಸ್ಥಿತ್ವವನ್ನು ಅಲುಗಾಡಿಸಲು ಮುಂದಾಗಿದ್ದರೆ. ಇತ್ತ ರಾಜ್ಯ ಸರ್ಕಾರ ಪ್ರತ್ಯೇಕ ಧ್ವಜ ಹೊಂದಲು ಮುಂದಾಗಿದೆ. ಸಧ್ಯಕ್ಕೆ ಕರ್ನಾಟಕ ಸರ್ಕಾರ ಹಳದಿ, ಕೆಂಪು ಮಿಶ್ರಿತ ಧ್ವಜವನ್ನು ನಾಡ ಧ್ವಜವನ್ನಾಗಿ ಸ್ವೀಕರಿಸಿದೆ. ಆದರೆ, ಇದಕ್ಕೆ ಯಾವುದೇ ಅಧಿಕೃತವಾದ ಮಾನ್ಯತೆ ಇಲ್ಲ.  ದೇಶದಲ್ಲಿ ಎಲ್ಲಾ ರಾಜ್ಯಗಳು ತ್ರಿವರ್ಣ ಧ್ವಜವನ್ನು ಮಾತ್ರ ಹೊಂದಬೇಕೆಂಬ ನಿಯಮವಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಸಂವಿಧಾನದ 370ನೆ ವಿಧಿಯ ಪ್ರಕಾರ ಪ್ರತ್ಯೇಕವಾದ ಧ್ವಜವನ್ನು ನೀಡಲಾಗಿದೆ.

ದೇಶದಲ್ಲೇ ಎರಡು ಧ್ವಜಗಳನ್ನು ಅಧಿಕೃತವಾಗಿ ಹೊಂದಿರುವ ರಾಜ್ಯವೆಂದರೆ ಜಮ್ಮು ಮತ್ತು ಕಾಶ್ಮೀರ ಮಾತ್ರ. ಒಂದು ವೇಳೆ ಕರ್ನಾಟಕವೂ ತನ್ನ ನಾಡ ಧ್ವಜವನ್ನು ಅಂಗೀಕರಿಸಿದರೆ ರಾಷ್ಟ್ರದಲ್ಲೇ ಎರಡು ಧ್ವಜ ಹೊಂದಿದ ರಾಜ್ಯವೆಂಬ ಹೆಗ್ಗಳಿಕೆಗೆ ಕರುನಾಡು ಪಾತ್ರವಾಗುತ್ತದೆ.

ಸಮಿತಿ ರಚನೆ:

ಇದೀಗ ರಾಜ್ಯ ಸರ್ಕಾರ ಹಳದಿ, ಕೆಂಪು ಮಿಶ್ರಿತ ಧ್ವಜವನ್ನು ಅಧಿಕೃತವಾಗಿ ನಾಡಧ್ವಜವನ್ನಾಗಿ ಮಾನ್ಯ ಮಾಡಲು 9 ಮಂದಿ ಹಿರಿಯ ಸಾಹಿತಿಗಳ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಅಧ್ಯಯನ ನಡೆಸಿ ಹಾಲಿ ಇರುವ ಧ್ವಜವನ್ನೇ ಅಂಗೀಕರಿಸಬೇಕೆ, ಇಲ್ಲವೇ ಹೊಸದೊಂದು ಧ್ವಜವನ್ನು ಮಾನ್ಯ ಮಾಡಬೇಕೆ ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಅದಕ್ಕಾಗಿಯೇ ಸಾಹಿತಿಗಳು, ಚಿಂತಕರು ಹಾಗೂ ಕನ್ನಡ ಆಸಕ್ತರನ್ನೊಳಗೊಂಡ 9 ಮಂದಿ ಸಮಿತಿಯನ್ನು ರಚಿಸಿದ್ದಾರೆ. ಸಾಮಾನ್ಯವಾಗಿ ನಾಡ ಧ್ವಜವನ್ನು ನಾವು ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಸೇರಿದಂತೆ ಕೆಲವೇ ಸಂದರ್ಭಗಳಲ್ಲಿ ಈ ಧ್ವಜಾರೋಹಣ ಮಾಡುತ್ತಿದ್ದವು. ಇದಕ್ಕೆ ಯಾವುದೇ ಮಾನ್ಯತೆ ಇಲ್ಲವಾದರೂ ಕಳೆದ ಹಲವು ದಶಕಗಳಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

ಬಿಜೆಪಿಯಿಂದ ವಿರೋಧ:

ಈ ಹಿಂದೆ 2012ರಲ್ಲಿ ಬಿಜೆಪಿ ರಾಜ್ಯಕ್ಕೆ ಎರಡು ಧ್ವಜ ಬೇಕು ಎಂಬ ಬೇಡಿಕೆಯನ್ನು ತಿರಸ್ಕರಿಸಿತ್ತು. ಅಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾಗಿದ್ದ ಗೋವಿಂದಕಾರಜೋಳ ಅವರು, ಒಂದೇ ರಾಷ್ಟ್ರ ಒಂದೇ ಧ್ವಜ ಎಂಬ ನೀತಿಯನ್ನು ಅಳವಡಿಸಿಕೊಂಡಿರುವ ಕಾರಣ ಎರಡು ಧ್ವಜಗಳನ್ನು ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಇದೀಗ ರಾಜ್ಯ ಸರ್ಕಾರ ನಾಡ ಧ್ವಜವನ್ನು ಅಧಿಕೃತಗೊಳಿಸಲು ಮುಂದಾಗಿರುವುದು ಕನ್ನಡಿಗರಲ್ಲಿ ಅಸಮಾಧಾನ ಉಂಟು ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin