ಕರ್ನಾಟಕದಲ್ಲಿ ಕಮಲ್, ರಜನಿ ಸಿನಿಮಾಗಳ ನಿಷೇಧಕ್ಕೆ ಅನಂತನಾಗ್ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

Anant-Nag--01

ಬೆಂಗಳೂರು, ಏ.10-ಮಾಧ್ಯಮಗಳಿಂದ ದೂರು ಇರಲು ಬಯಸುವ ಖ್ಯಾತ ಹಿರಿಯ ನಟ ಕಾವೇರಿ ವಿವಾದದಲ್ಲಿ ಕನ್ನಡಿಗರ ಪರ ಧನಿ ಎತ್ತಿರುವುದು ಹೋರಾಟಗಾರರಲ್ಲಿ ಚೈತನ್ಯ ಮೂಡಿಸಿದೆ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡಿನ ಖ್ಯಾತ ನಟರಾದ ರಜನಿಕಾಂತ್ ಮತ್ತು ಕಮಲ್‍ಹಾಸನ್ ಅವರು ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆಗೆ ಅನಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಅವರಿಬ್ಬರ ಸಿನಿಮಾಗಳ ನಿಷೇಧಕ್ಕೆ ಬೆಂಬಲ ನೀಡುವುದಾಗಿಯೂ ಘೋಷಿಸಿದ್ದಾರೆ.

ವಾರ್ತಾವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರಜನಿ ಮತ್ತು ಕಮಲ್ ಅವರೊಂದಿಗೆ ವೈಯಕ್ತಿಕ ಸಂಧಾನದ ಸಮಯ ಮುಗಿದಿದೆ. ಅವರ ಸಿನಿಮಾಗಳ ನಿಷೇಧಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಖ್ಯಾತರಾಗಿರುವ ಈ ಇಬ್ಬರು ನಟರು ರಾಜಕೀಯ ರಂಗ ಪ್ರವೇಶಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಇವರು ಕಾವೇರಿ ವಿಷಯದಲ್ಲಿ ಕ್ಷುಲ್ಲಕ ಮತ್ತು ಹೊಲಸು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿರುವ ವಿಡಿಯೋ ತುಣಕು ಬಿಡುಗಡೆಯಾಗಿದೆ.

ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಹಿರಿಮೆ ರಕ್ಷಣೆಗೆ ಕನ್ನಡದ ಸಮಸ್ತ ಜನತೆ ಜೊತೆ ನಾನಿದ್ದೇನೆ ಎಂದು ಅವರು ಸಾರಿರುವುದು ಕನ್ನಡಪರ ಹೋರಾಟಗಾರರಲ್ಲಿ ಹುರುಪು ಮೂಡಿಸಿದೆ. ಕಾವೇರಿ ನದಿ ನೀರು ವಿಷಯದಲ್ಲಿ ತಮಿಳುನಾಡು ರಾಜಕಾರಣಿಗಳು ಮತ್ತು ಖ್ಯಾತನಾಮರು ಮೊದಲಿನಿಂದಲೂ ಅಸಹನೆ, ಅಸಹಕಾರ ಮತ್ತು ಘರ್ಷಣೆ ನಿಲುವನ್ನು ತಳೆದಿದ್ದಾರೆ. ಈಗ ತಮಿಳುನಾಡು ಬಂದ್ ಆಚರಿಸಿ ಜನರನ್ನು ಪ್ರಚೋದಿಸಿ ಕರ್ನಾಟಕದ ವಿರುದ್ದ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಇದು ಖಂಡನಾರ್ಹ ಎಂದು ಕಟುವಾಗಿ ಟೀಕಿಸಿದ್ದಾರೆ.

ರಜನೀಕಾಂತ್ ಮತ್ತು ಕಮಲ್‍ಹಾಸನ್ ಅವರಂಥ ಹಿರಿಯ ನಟರು ಇಂಥ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದಕ್ಕೂ ಮುನ್ನ ವಿವೇಕದಿಂದ ವರ್ತಿಸಬೇಕು. ಇವರಿಬ್ಬರು ರಾಜಕೀಯ ರಂಗ ಪ್ರವೇಶಿಸಿರುವುದು ಸ್ವಾಗತಾರ್ಹ ಆದರೆ ಅವರ ನಿಲುವು ಮತ್ತು ಪ್ರಚೋದನಾಕಾರಿ ಹೇಳಿಕೆಗಳು ಖಂಡನೀಯ ಎಂದು ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಅನಂತನಾಗ್ ಟೀಕಿಸಿದ್ದಾರೆ.

Facebook Comments

Sri Raghav

Admin