ಕರ್ನಾಟಕದಲ್ಲಿ ರಜನಿಯ ‘ಕಾಲ’ ಚಿತ್ರ ಬಿಡುಗಡೆ ಮಾಡಿದರೆ ಉಗ್ರ ಪ್ರತಿಭಟನೆ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Rajnikant--01
ಬೆಂಗಳೂರು, ಮೇ 26- ತಮಿಳುನಟ ರಜನಿಕಾಂತ್ ಅವರ ಕಾಲ ಚಲನಚಿತ್ರವು ಕರ್ನಾಟಕದಲ್ಲಿ ಬಿಡುಗಡೆಯಾಗಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವಕಾಶ ನೀಡಬಾರದೆಂದು ಕರ್ನಾಟಕ ರಣಧೀರ ಪಡೆ ಒತ್ತಾಯಿಸಿದೆ. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಣಧೀರ ಪಡೆಯ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ಬಿ, ಕಾವೇರಿ ನದಿ ನೀರಿನ ಹಂಚಿಕೆ ಕುರಿತ ನಿರ್ವಹಣಾ ಮಂಡಳಿ ರಚನೆ ಸಂಬಂಧ ರಜನಿಕಾಂತ್ ಅವರ ಅಭಿಪ್ರಾಯ ನ್ಯಾಯಸಮ್ಮತವಲ್ಲ ಹಾಗಾಗಿ ಅವರ ಅಭಿನಯದ ಚಲನಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದೆಂದು ಆಗ್ರಹಿಸಿದರು.

ಚನೈನಲ್ಲಿ ನಡೆದ ಪ್ರತಿಭಟನೆಯಲ್ಲಿ ರಜನಿಯವರು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿರುವುದು ಖಂಡನಿಯ ಎಂದರು. ಜೂ 7 ರಂದು ನಟ ರಜಿನಿಕಾಂತ್ ಅಭಿನಯದ ಕಾಲ ತಮಿಳು ಸಿನಿಮಾ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದು ಒಂದು ವೇಳೆ ಕನ್ನಡಿಗರ ಭಾವನೆಯನ್ನು ಧಿಕ್ಕರಿಸಿ ಬಿಡುಗಡೆಗೆ ಅವಕಾಶ ಮಾಡಿ ಕೊಟ್ಟರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಲ್ಲದೆ ಸಿನಿಮಾ ಪ್ರದರ್ಶನ ದಿನದಂದು ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆ ನೀವೆ ಜವಾಬ್ದಾರರು ಎಂದು ಹೇಳಿದರು. ಕರುನಾಡ ಸೇವಕರ ಸಂಘದ ರೂಪೇಶ್ ರಾಜಣ್ಣ, ಕರ್ನಾಟಕ ರಣಧೀರ ಪಡೆಯ ಖಜಾಚಿ ರಮಾನಂದ ಅಂಕೋಲ ಉಪಸ್ಥಿತರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin