ಕರ್ನಾಟಕದಲ್ಲೂ ಬಿಜೆಪಿ ಠುಸ್ ಆಗಲಿದೆ : ಉಗ್ರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Ugrappa--02
ಮಹದೇವಪುರ, ಮಾ.16- ಪ್ರಧಾನಿ ನರೇಂದ್ರ ಮೋದಿಯವರು ಅಂಗೈಯಲ್ಲಿ ಸ್ವರ್ಗ ತೋರಿಸಿದ್ದಾರೆಂಬುದು ಎಲ್ಲರಿಗೂ ಮನವರಿಕೆ ಆಗಿದ್ದು ರಾಜ್ಯದಲ್ಲೂ ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ ತಿಳಿಸಿದರು. ಕ್ಷೇತ್ರದ ಮಾರತ್ ಹಳ್ಳಿ ಬಳಿ ಪಾರ್ಥಾ ಡೆಂಟಲ್ ಕ್ಲೀನಿಕ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯುಪಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು ಬಿಜೆಪಿಯ ಅವನತಿ ಆರಂಭವಾಗಿದೆ ಎಂದು ತಿಳಿಸಿದರು.
ಪಾರ್ಥಾ ಡೆಂಟಲ್ ಅತಿ ದೊಡ್ಡ ಸಂಸ್ಥೆ ಈ ಸಂಸ್ಥೆಯು ತನ್ನ 89 ನೇಯ ಶಾಖೆಯನ್ನು ಆರಂಭಿಸುವ ಮೂಲಕ ದೇಶದ ನಿರುದ್ಯೋಗ ವ್ಯವಸ್ಥೆಯನ್ನು ಹೋಗಲಾಡಿಸುವ ನಿಟ್ಟಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ ಎಂದರು. ಈಗಾಗಲೆ 1200ಕ್ಕೂ ಹೆಚ್ಚು ಉದ್ಯೋಗಾವಕಾಶ ಕಲ್ಪಸಿದೆ, ಮಾತ್ರವಲ್ಲದೆ ಬಡ ಮತ್ತು ಸಾಮಾನ್ಯ ಜನರಿಗೆ ಕೈಗೆಟಕುವ ಧರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸಯನ್ನು ನೀಡಲಾಗುತ್ತಿದೆ ಎಂದು ಶ್ಲಾಘಿಸಿದರು. ಪಾಲಿಕೆ ಸದಸ್ಯ ರಮೇಶ್, ಫಾರ್ಥಾ ಸಂಸ್ಥೆಯ ಅಧ್ಯಕ್ಷ ಪಾರ್ಥಸಾರತಿ, ಸಿಇಒ ವಿಜಯ್, ಜಿಎಂ ರಮೇಶ್ ಮುಂತಾದವರು ಹಾಜರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin