ಕರ್ನಾಟಕದ ಕರಾವಳಿಯಲ್ಲಿ ಓಖಿ ಚಂಡಮಾರುತದ ಭೀತಿ, ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

Karnataka--02

ಮಂಗಳೂರು, ಡಿ.2- ಹಿಂದೂ ಮಹಾಸಾಗರದಲ್ಲಿ ಎದ್ದಿರುವ ಓಖಿ ಚಂಡಮಾರುತದ ಪ್ರಭಾವ ರಾಜ್ಯದ ಕರಾವಳಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ. ಹವಾಮಾನ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಗಾಳಿ ಬೀಸಲಿದ್ದು, ಜತೆಗೆ ಧಾರಾಕಾರ ಮಳೆಯೂ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಅಲ್ಲದೆ, ಸಮುದ್ರದ ಅಬ್ಬರೂ ಹೆಚ್ಚಾಗಲಿದ್ದು, ಮುಂದಿನ 48 ಗಂಟೆಗಳ ಕಾಲ ಬೆಸ್ತರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಹಿಂದೂ ಮಹಾಸಾಗರದಲ್ಲಿ ಈ ಋತುವಿನ ಮೊದಲ ಚಂಡಮಾರುತ ಓಖಿ ತನ್ನ ಪ್ರಭಾವವನ್ನು ಈಗಾಗಲೇ ತಮಿಳುನಾಡು ಹಾಗೂ ಕೇರಳದ ಬಹುಪಾಲು ಪ್ರದೇಶದಲ್ಲಿ ತೋರಿಸಿದ್ದು, ಇದರಿಂದಾಗಿ ಈಗಾಗಲೇ ಸಾವು-ನೋವು ಸಂಭವಿಸಿದ್ದು, ಅನೇಕರಿಗೆ ಗಂಭೀರ ಗಾಯಗಳಾಗಿವೆ. ಕೋಟ್ಯಂತರ ರೂ.ಗಳ ಆಸ್ತಿ-ಪಾಸ್ತಿ ನಾಶವಾಗಿದೆ. ಇದೀಗ ಈ ಓಖೀ ಚಂಡಮಾರುತ ಅರಬ್ಬೀ ಸಮುದ್ರದ ಮೂಲಕ ಹಾದು ಹೋಗಲಿದ್ದು, ಇದರಿಂದಾಗಿ ರಾಜ್ಯದ ಕರಾವಳಿಯ ಅದರಲ್ಲೂ ಮಂಗಳೂರು ಕರಾವಳಿ ಮೇಲೆ ಇದರ ಪರಿಣಾಮ ಬೀರಲಿದೆ.

Facebook Comments

Sri Raghav

Admin