ಕರ್ನಾಟಕದ ಶೇ.97ರಷ್ಟು ಮಂತ್ರಿಗಳು ಕೋಟ್ಯಾಧಿಪತಿಗಳು..! ಡಿ.ಕೆ.ಶಿಗೆ ಪ್ರಥಮ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

adgsfdgasfdgh

ನವದೆಹಲಿ, ಆ.6-ಕರ್ನಾಟಕ ರಾಜ್ಯದ ಶೇ.97ರಷ್ಟು ಸಚಿವರು ಕೋಟ್ಯಾಧಿಪತಿಗಳು !  ಇವರಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಥಮ ಸ್ಥಾನ…..!!  ದೇಶದ 29ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳ 620 ಮಂತ್ರಿಮಹೋದಯರ ಪೈಕಿ ಚುನಾವಣೆ ವೇಳೆ ಸಲ್ಲಿಸಿದ ಪ್ರಮಾಣಪತ್ರವನ್ನು ಪರಿಶೀಲಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಸ್ ರಿಫಾರ್ಮ್(ಎಡಿಆರ್) ಸಂಸ್ಥೆ ಈ ಅಂಕಿಅಂಶ ನೀಡಿದೆ. ಭಾರತದಲ್ಲಿನ ವಿವಿಧ ರಾಜ್ಯಗಳ ಪೈಕಿ ತೆಲುಗು ದೇಶಂ ಪಕ್ಷದ ಪೋಗುರು ನಾರಾಯಣ ಅವರು 469 ಕೋಟಿ ರೂ.ಗಳ ಘೋಷಿತ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ,  ಡಿ.ಕೆ.ಶಿವಕುಮಾರ್ ಅವರ ಸ್ವಯಂ ಘೋಷಿತ ಆಸ್ತಿ 251 ಕೋಟಿ ರೂ.ಗಳು.ಈ ರಾಜ್ಯಗಳ ಸಚಿವರುಗಳಲ್ಲಿ ಶೇ.34ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಶೇ.76ರಷ್ಟು ಮಂದಿ ಕೋಟ್ಯಾಧೀಶ್ವರರಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಕಡಿಮೆ ಸರಾಸರಿ ಆಸ್ತಿ ಹೊಂದಿರುವ ರಾಜ್ಯ(12 ಸಚಿವರು) ತ್ರಿಪುರ, ಅರುಣಾಚಲಪ್ರದೇಶ,  ಪಂಜಾಬ್ ಮತ್ತು ಪಾಂಡಿಚೇರಿ ರಾಜ್ಯಗಳ ಎಲ್ಲ ಸಚಿವರೂ ಕರೋಡ್‍ಪತಿಗಳು. ನಂತರದ ಸ್ಥಾನ ಕರ್ನಾಟಕದ್ದು (ಶೇ.97).  ರಾಜಸ್ತಾನ, ಗೋವಾ, ಮೇಘಾಲಯ ಮತ್ತು ಛತ್ತೀಸ್‍ಗಢದ ಶೇ.92ರಷ್ಟು ಸಚಿವರು ಒಂದು ಕೋಟಿ ರೂ.ಗಳಿಗೂ ಮೇಲ್ಪಟ್ಟ ಆಸ್ತಿ ಹೊಂದಿರುವುದನ್ನು ಘೋಷಿಸಿಕೊಂಡಿದ್ದಾರೆ.

Facebook Comments

Sri Raghav

Admin