ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಚಿನ್ನೇಗೌಡರು ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

KFCC--01

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಚಿನ್ನೇಗೌಡರು ಆಯ್ಕೆ
ಬೆಂಗಳೂರು, ಜೂ.26-ಈ ಬಾರಿಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಮುಗಿದಿದ್ದು ಫಲಿತಾಂಶ ಕೂಡ ಹೊರಬಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಗಾದಿಯನ್ನು ಈ ಬಾರಿ ಡಾ.ರಾಜ್‍ಕುಟುಂಬದ ಚಿನ್ನೇಗೌಡರು ಅಲಂಕರಿಸಿದ್ದಾರೆ. 552 ಮತಗಳನ್ನು ಪಡೆದು ಎಸ್.ಎ.ಚಿನ್ನೇಗೌಡ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಕೆ ಮಾಡಿರುವುದು ವಿಶೇಷ. ಪ್ರತಿ ವರ್ಷ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಬೇಕು. ಆದರೆ, ಕಾರಣಾಂತರಗಳಿಂದ ಕಳೆದ ಎರಡೂವರೆ ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ಈ ಬಾರಿ ವಿತರಕರ ವಲಯಕ್ಕೆ ಅವಕಾಶ ಸಿಕ್ಕಿದ್ದು, ದೊಡ್ಡಮನೆ ಕುಟುಂಬದಿಂದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಹೋದರ ಎಸ್.ಎ.ಚಿನ್ನೇಗೌಡ ಅವರು ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚಿನ್ನೇಗೌಡರ ಎದುರು ಸ್ಪರ್ಧಿಸಿದ್ದ ಮಾರ್ಸ್ ಸುರೇಶ್ ಪರಾಭವಗೊಡಿದ್ದಾರೆ.

ಉಳಿದಂತೆ ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆಗೂ ಚುನಾವಣೆ ನಡೆದಿದ್ದು ಇದರಲ್ಲಿ ಕೆಲವು ವಲಯಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ವಾಣಿಜ್ಯ ಮಂಡಳಿ ಕಟ್ಟಡ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮೂರು ವಲಯಗಳ ಸದಸ್ಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಈ ಬಾರಿಯ ಚುನಾವಣೆ ಬಹಳಷ್ಟು ಕುತೂಹಲ ಕೆರಳಿಸಿತ್ತು.

ಕರ್ನಾಟಕ ಚಲಚಿತ್ರ ಪದಾಧಿಕಾರಿಗಳು ಪಟ್ಟಿ :
ಅಧ್ಯಕ್ಷರು : ಎ ಚಿನ್ನೇಗೌಡ
ಉಪಾಧ್ಯಕ್ಷ ನಿರ್ಮಾಪಕರ ವಲಯ : ಸುಬ್ರಹ್ಮಣ್ಯ .ವಿ (ಕರಿಸುಬ್ಬು)
ಉಪಾಧ್ಯಕ್ಷ ವಿತರಕ ವಲಯ : ಕೆ.ಮಂಜು
ಉಪಾಧ್ಯಕ್ಷ ಪ್ರದರ್ಶಕ ವಲಯ : ಕೆ.ಸಿ .ಅಶೋಕ್
ಗೌರವ ಕಾರ್ಯದರ್ಶಿ ನಿರ್ಮಾಪಕರ ವಲಯ : ಬಾ.ಮಾ .ಹರೀಶ್
ಗೌರವ ಕಾರ್ಯದರ್ಶಿ ವಿತರಕ ವಲಯ : ಶ್ರೀನಿವಾಸ್ ಹೆಚ್. ಸಿ .(ಶಿಲ್ಪಾ)
ಗೌರವ ಕಾರ್ಯದರ್ಶಿ ಪ್ರದರ್ಶಕ ವಲಯ : ಸುಂದರ್ ರಾಜು. ಆರ್
ಗೌರವ ಖಜಾಂಚಿ : ಕೆ.ಎಂ. ವೀರೇಶ್

Facebook Comments

Sri Raghav

Admin