‘ಕರ್ನಾಟಕ ದಸರಾ’ ಎಂದು ಸಂಭೋಧಿಸುವಂತೆ ಸಿಎಂಗೆ ಪಾಪು ಪಾತ್ರ

ಈ ಸುದ್ದಿಯನ್ನು ಶೇರ್ ಮಾಡಿ

Papu-b

ಬೆಂಗಳೂರು, ಆ.11- ದಸರಾ ಉತ್ಸವವನ್ನು ಕರ್ನಾಟಕ ದಸರಾ ಎಂದು ಸಂಬೋಧಿಸಬೇಕೆಂದು ನಾಡು-ನುಡಿ ಹೋರಾಟಗಾರ ಡಾ.ಪಾಟೀಲಪುಟ್ಟಪ್ಪನವರು ಒತ್ತಾಯಿಸಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿರುವ ಅವರು, ದಸರಾ ಉತ್ಸವವನ್ನು ವಿಜಯನಗರ ಸಾಮ್ರಾಜ್ಯ ಆರಂಭಿಸಿದ್ದು, ಅದು ಪಥನಗೊಂಡ ನಂತರ ಮೈಸೂರಿನಲ್ಲಿ ದಸರಾ ಉತ್ಸವವನ್ನು ಪ್ರಾರಂಭಿಸಲಾಯಿತು. ಮೈಸೂರು ಕರ್ನಾಟಕ ರಾಜ್ಯದಲ್ಲಿ ಇರುವುದರಿಂದ ಕರ್ನಾಟಕ ದಸರಾ ಉತ್ಸವ ಎಂಬುದಾಗಿ ಕರೆದಿದ್ದರೆ ಸರಿ ಇರುತ್ತಿತ್ತು ಎಂದಿದ್ದಾರೆ.
ಈ ಉತ್ಸವಕ್ಕೆ ಮೈಸೂರು ಪ್ರದೇಶ ಒಂದರಿಂದ ಹಣ ವ್ಯಯವಾಗುವುದಿಲ್ಲ.

ಕರ್ನಾಟಕ ರಾಜ್ಯ ಖಜಾನೆಯಿಂದ ಕೋಟ್ಯಂತರ ರೂ. ವೆಚ್ಚವಾಗುತ್ತದೆ. ಉತ್ಸವ ನಡೆಸುವುದರಲ್ಲಿ ಸಮಗ್ರ ರಾಜ್ಯದ ಪಾಲೂ ಇದೆ. ಹಾಗಾಗಿ ಕರ್ನಾಟಕ ದಸರಾ ಉತ್ಸವವನ್ನು ಚೆನ್ನವೀರ ಕಣವಿ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದರೆ  ನನಗೆ ಸಂತೋಷವಾಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  ನೀವು ಕೇವಲ ಮೈಸೂರಿನ ಮುಖ್ಯಮಂತ್ರಿಯಾಗದೆ ಕರ್ನಾಟಕದ ನಿಜವಾದ ಮುಖ್ಯಮಂತ್ರಿ ಆಗಿದ್ದರೆ ಸಂತೋಷವಾಗುತ್ತಿತ್ತು. ಆದರೆ, ರಾಜ್ಯದಲ್ಲಿ ಇನ್ನೂ ಎಲ್ಲವೂ ಮೈಸೂರು ಮಯವಾಗಿರುವುದು ಸರಿಯಲ್ಲ ಎಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin