ಕರ್ನಾಟಕ ಬಂದ್‍ ವೇಳೆ ಶುಕ್ರವಾರ ತಮಿಳು ಚಾನೆಲ್‍ಗಳ ಪ್ರಸಾರ ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

Tamil-Channes

ಬೆಂಗಳೂರು, ಸೆ.7- ತಮಿಳುನಾಡಿಗೆ ಪಾಠ ಕಲಿಸೋಕೆ ಕೇಬಲ್ ಆಪರೇಟರ್‍ಗಳು ಸಜ್ಜಾಗಿದ್ದು, ಕರ್ನಾಟಕ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್, ಕಾವೇರಿ ವಿಚಾರವಾಗಿ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‍ಗೆ ತಮಿಳು ಚಾನೆಲ್‍ಗಳ ಪ್ರಸಾರ ಸ್ಥಗಿತಗೊಳಿಸಿ ಬೆಂಬಲ ನೀಡಲಿದೆ. ಈ ಬಗ್ಗೆಮಾಹಿತಿ ನೀಡಿದ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು, ಶುಕ್ರವಾರದಂದು ಎಲ್ಲಾ ತಮಿಳು ಚಾನೆಲ್‍ಗಳ ಪ್ರಸಾರ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದರು.  ಶುಕ್ರವಾರದಂದು ಮನೋರಂಜನೆ ಹಾಗೂ ನ್ಯೂಸ್ ಚಾನೆಲ್‍ಗಳ ಪ್ರಸಾರ ಇರುವುದಿಲ್ಲ. ಇಂದು ಬೆಳಗ್ಗೆ 11 ಗಂಟೆಗೆ ಸಭೆ ಸೇರಲಿರೋ ಕೇಬಲ್ ಆಪರೇಟರ್ಸ್ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin