ಕಲಬುರ್ಗಿ,ಗೌರಿ ಹತ್ಯೆ ಪ್ರಕರಣ : ಶಂಕಿತರ ವಿರುದ್ಧ ಶೀಘ್ರದಲ್ಲೇ ಚಾರ್ಜ್ ಶೀಟ್

ಈ ಸುದ್ದಿಯನ್ನು ಶೇರ್ ಮಾಡಿ

Gouri-Lankesh

ಬೆಂಗಳೂರು, ಫೆ.11- ಹಿರಿಯ  ಸಂಶೋಧಕ ಡಾ. ಎಂ.ಎಂ. ಕಲಬುರಗಿ ಹಾಗು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೈದಿದ್ದಾರೆ ಎನ್ನಲಾದ 10 ಶಂಕಿತ ಆರೋಪಿಗಳ ವಿರುದ್ಧ ಶೀಘ್ರವೇ ನ್ಯಾಯಾಲ ಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.

ತನಿಖೆ ಕೊನೆಯ ಹಂತ ತಲುಪಿದೆ ಎಂದು ತಿಳಿಸಿದ ಮೂಲಗಳು ಶಂಕಿತ ಆರೋಪಿಗಳಾದ ಸುದನ್ವ, ರಾಜೇಶ್ ಬಂಗೇರ್, ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ರಾಮಚಂದ್ರ ಬದ್ದಿ, ಅಮಿತ್ ದಗ್ವೇಕರ್, ಭರತ್ ಕುರ್ಣೆ, ಸುಜೀತ್ ಹಾಗೂ ಶರದ್ ಅವರ ವಿರುದ್ಧ ಚಾರ್ಜಶೀಟ್ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎರಡೂ ಹತ್ಯೆಗೂ ಒಂದೇ ಪಿಸ್ತೂಲು ಬಳಸಲಾಗಿದೆ ಎಂದು ಅಂಶ ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.
2015, ಆಗಷ್ಟ 30ರಂದು ಧಾರವಾಡದ ಕಲ್ಯಾಣನಗರ ಬಡಾವಣೆಯಲ್ಲಿ ಕಲಬುರಗಿ ಅವರ ಹತ್ಯೆಯಾಗಿದ್ದನ್ನು ಸ್ಮರಿಸಬಹುದು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin