ಕಲಾಪಕ್ಕೆ ಅಡ್ಡಿಪಡಿಸಿದ 44 ಕಾಂಗ್ರೆಸ್ ಶಾಸಕರ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

Gujarat

ಗುಜರಾತ್, ಆ.23-ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಭಾರೀ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಪೀಕರ್ 44 ಮಂದಿ ಶಾಸಕರನ್ನು ಅಮಾನತುಗೊಳಿಸಿದ್ದಾರೆ.  ಒಟ್ಟು 56 ಕಾಂಗ್ರೆಸ್ ಶಾಸಕರಲ್ಲಿ 44 ಮಂದಿ ಅಮಾನತುಗೊಳಿಸಲಾಗಿದೆ. ಇವರು ಸದನ ಆರಂಭಗೊಳ್ಳುತ್ತಿದ್ದಂತೆಯೇ ಶಿಸ್ತು ಉಲ್ಲಂಘಿಸಿ, ಕಲಾಪಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸುವಾಗ ಆಡಳಿತ ಪಕ್ಷದ ಬಿಜೆಪಿ ಶಾಸಕರ ವಿರುದ್ಧ ಕೈ ಕೈ ಮಿಲಾಯಿಸುವ ಹಂತ ತಲುಪಿದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಸ್ಪೀಕರ್ ಮಾರ್ಷೆಲ್ಗಳನ್ನು ಕರೆಯಿಸಿ 44 ವಿಪಕ್ಷ ಶಾಸಕರನ್ನು ಸಭೆಯಿಂದ ಒಂದು ದಿನ ಮಟ್ಟಿಗೆ ಅಮಾನತು ಮಾಡಿದ್ದಾರೆ  ಇದಲ್ಲದೆ, ಅಹಮದಾಬಾದಿನ ಗಾಂಧಿನಗರದಲ್ಲೂ ಯುವ ಕಾಂಗ್ರೆಸ್ ಭಾರೀ ಪ್ರತಿಭಟನೆ ನಡೆಸಿದ್ದು, ಗುಂಪನ್ನು ಚದುರಿಸಲು ಪೊಲೀಸರು  ಹರಸಾಹಸ ಪಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin