ಕಲಾವಿದ ದೇವರಾಜು ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

devaraj

ಚನ್ನಪಟ್ಟಣ, ಅ.28- ಕಳೆದ ಎರಡು ದಿನದ ಹಿಂದೆ ಕುಡಿನೀರು ಕಟ್ಟೆಯ ಬಳಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಕಲಾವಿದ ಎನ್.ದೇವರಾಜು ನಿನ್ನೆ ನಿಧನ ಹೊಂದಿದ್ದು, ಅಂತ್ಯಕ್ರಿಯೆಯು ಇಂದು ಸ್ವಗ್ರಾಮದಲ್ಲಿ ನಡೆಯಿತು.ಇವರು ಅವ್ವೇರಹಳ್ಳಿ ಗ್ರಾಮದ ಲೇಟ್ ನಾಗರಾಜು ಮತ್ತು ಲಕ್ಷ್ಮಮ್ಮನವರ ಮಗನಾಗಿದ್ದು, ವೆಂಕಟಗಿರಿಗೌಡರ ದತ್ತುಪುತ್ರನಾಗಿ ಭೈರಾಪಟ್ಟಣದಲ್ಲಿ ವಾಸವಾಗಿದ್ದರು. ಹೆಂಡತಿ ಚಂದ್ರಮ್ಮ, ಮಕ್ಕಳಾದ ಅಭಿಷೇಕ್ ಮತ್ತು ಶಿವಶಂಕರ್‍ರವರನ್ನು ಅಗಲಿದ್ದಾರೆ. ದೇವರಾಜುರವರು ಕೆಇಬಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೋಲಾಟ ಮತ್ತು ನಾಟಕಗಳಲ್ಲಿ ಇವರು ಪರಿಣಿತಿ ಹೊಂದಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin