ಕಲಾಸಾಮ್ರಾಟ್ ಎಸ್.ನಾರಾಯಣ್ ಸೇರಿದಂತೆ ಹಲವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Aryabhata

ಬೆಂಗಳೂರು, ಮೇ 19-ಕಲಾಸಾಮ್ರಾಟ್ ಎಸ್.ನಾರಾಯಣ್, ಪ್ರೇಮಕವಿ ಕೆ.ಕಲ್ಯಾಣ್, ಪದ್ಮಶ್ರೀ ನಟಿ ಡಾ.ಭಾರತಿ ವಿಷ್ಣುವರ್ಧನ್, ಡಾ.ತೇಜಸ್ವಿನಿ ಅನಂತ್‍ಕುಮಾರ್, ಸ್ವಾತಂತ್ರ್ಯ ಹೋರಾಟಗಾರ್ತಿ ಕುಸುಮಾವತಿ ದೇಶಪಾಂಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಹಲವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಮೇ 24 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೆರವೇರಿಸಲಿದ್ದಾರೆ. ದೂರದರ್ಶನ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ.ಮಹೇಶ್ ಜೋಷಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಎಲ್.ರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಗಿರೀಶ್‍ರಾವ್.ಡಾ.ಪ್ರೊ .ಬಿ.ಎನ್.ಬಿ.ಎಂ.ಪ್ರಸಾದ್, ಡಾ.ಎಂ.ಜಿ.ಸದಾಶಿವಯ್ಯ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉದ್ಯಮಿ ಸಿ.ನಟರಾಜ್, ಫ್ರಾನ್ಸಿಸ್ ಜೇವಿಯರ್ ಮೆಂಟ್ಸೋನಾ(ದುಬೈ), ಶಿಕ್ಷಣ ಕ್ಷೇತ್ರದಲ್ಲಿ ಜಿ.ಎಸ್.ಎಸ್.ರಾವ್(ಸಿಂಗಾಪೂರ್), ಕನ್ನಡ ನಾಡು, ನುಡಿ -ರಾಜೇಶ್ ಬಿ.ಶೆಟ್ಟಿ (ಬರೇನ್), ಸುಬ್ರಹ್ಮಣ್ಯ ಹೆಬ್ಬಾಗಿಲು(ಕತಾರ್), ಪಾಕಶಾಸ್ತ್ರ -ವೆಂಕಟರಾಜ್‍ಭಟ್, ತೋಟಗಾರಿಕೆ -ಬಿ.ಎನ್.ಶ್ರೀನಿವಾಸಮೂರ್ತಿ, ಕೃಷಿ – ಕೃಷ್ಣಪ್ಪಗೌಡ ಪಡಂಬೈಲ್, ಪರಿಸರ-ಪಿ.ವಿ.ಮಲ್ಲಿಕಾರ್ಜುನಯ್ಯ, ಸಾಹಿತ್ಯ- ಪಿ.ಎನ್.ಲಕ್ಷ್ಮಿ ಮಲ್ಲಯ್ಯ, ಪತ್ರಿಕಾ ಛಾಯಾಗ್ರಹಣ-ಶರಣಬಸಪ್ಪ, ಸಾಂಸ್ಕೃತಿಕ-ಡಾ.ಬಿ.ಕೆ.ದಿನಕರ್ ನಾಟ್ಯಾಲಯ, ವಿಕಲಚೇತನ ಕ್ರೀಡೆ-ಅರ್ಚನಾ ಎಂ.ಜೆ., ಯೋಗ-ಆಚಾರ್ಯ ಡಾ.ಎಂ.ನಿರಂಜನಮೂರ್ತಿ, ಶಿಲ್ಪಕಲೆ-ಡಾ.ಎಂ.ವೈದ್ಯಲಿಂಗಂ ಆಚಾರಿ, ಸಮಾಜಸೇವೆ- ಡಾ.ಕುಸುಮಾ ಭಟ್, ಕೆ.ಎಸ್.ಜೈ ವಿಠಲ್, ಎಸ್.ಎನ್.ಶಂಕರಮೂರ್ತಿ, ಶಿವರಾಮಶೆಟ್ಟಿ, ಎಸ್.ಈಶ್ವರರಾಯುಡು, ಸತೀಶ್ ಪಾಂಡುರಂಗ, ಮಮತಾ ದೇವರಾಜ್, ನಿಯಾಜ್ ಅಹಮದ್, ರಾಜಶೇಖರ್.ಎಸ್.ಎಸ್.ಬೇಳೂರು, ರಾಘವೇಂದ್ರ ಶೆಟ್ಟಿ, ಸಂಗೀತನಿರ್ದೇಶನ-ಅರ್ಜುನ್‍ಜನ್ಯ, ಭರತನಾಟ್ಯ-ನಾರಾಯಣ, ರೂಪಶ್ರೀ, ಮಧುಸೂದನ್, ಶ್ರೀದೇವಿಜಗನ್ನಾಥ್ ಸೇರಿದಂತೆ ಹಲವು ಗಣ್ಯರಿಗೆ ಆರ್ಯಭಟ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin