ಕಲಾ ರಸಿಕರ ಮನಗೆದ್ದ ಗ್ರಾಮೀಣ ಸೊಗಡಿನ ಜನಪದ ಗೀತೆಗಳು

ಈ ಸುದ್ದಿಯನ್ನು ಶೇರ್ ಮಾಡಿ

hanuru

ಹನೂರು, ಅ.10- ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ದಸರಾ ಮಹೋತ್ಸವದ ಎರಡು ದಿನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನೃತ್ಯ ನಾಟಕ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮಗಳು ಜನಮನ ಸೂರೆಗೊಂಡಿತು.ಚಲನಚಿತ್ರ ಹಿನ್ನೆಲೆ ಗಾಯಕಿ ಅರ್ಚನ ಉಡುಪ ಮತ್ತು ಶ್ವೇತಪ್ರಭು ಬೆಂಗಳೂರು ತಂಡದವರಿಂದ ವಿಶೇಷ ಸಂಗೀತ ಸಂಜೆ ಈ ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.ಪಟ್ಟಣದ ಕ್ರಿಸ್ತರಾಜ ಶಾಲಾ ಆವರಣದಲ್ಲಿ ಮೈಸೂರು ಸಮಿತಿ ತಾಲ್ಲೂಕು ಆಡಳಿತ ಹನೂರು ಕೊಳ್ಳೇಗಾಲ ವತಿಯಿಂದ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಶಾಲಾ ಮಕ್ಕಳು ಮತ್ತು ಮೈಸೂರು ಬೆಂಗಳೂರಿನಿಂದ ಆಗಮಿಸಿದ ಕಲಾ ತಂಡಗಳಿಳು ನೀಡಿದ ಸಾಂಸ್ಕೃತಿಕ  ಕಾರ್ಯಕ್ರಮ ಹಾಗೂ ನೃತ್ಯ ನಾಟಕ ಕಲೆಗಳು ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ಒಡೆಯರ್‍ಪಾಳ್ಯ ಸರ್ಕಾರಿ ಶಾಲಾ ಮಕ್ಕಳಿಂದ ಏಕಲವ್ಯ ಬಿಲ್ವಿಧ್ಯೆ ನಾಟಕ ಅಮೋಘವಾಗಿ ಮೂಡಿ ಬಂದಿತ್ತು. ಮತ್ತು ಲಂಬಾಣಿ ಜನಾಂಗದವರಿಂದ ಗ್ರಾಮೀಣ ಸೊಬಗಿನ ಸೋಬಾನೆ ಪದಗಳು ಭಜನೆ ಹಾಗೂ ಮೈಸೂರಿನಿಂದ ಆಗಮಿಸಿ ಹೆಣ್ಣು ಮಕ್ಕಳ ಭರತನಾಟ್ಯ ಜನರ ಕಣ್ಮನ ಸೆಳೆದವು.ಈ ಸಂದರ್ಭದಲ್ಲಿ ಕಲಾ ರಸಿಕರು ಸಿಳ್ಳೆ ಕೇಕೆಯನ್ನು ಹಾಕುತ್ತಾ ಕುಣಿದು ಕುಪ್ಪಳಿಸುವ ಮೂಲಕ ಗ್ರಾಮೀಣ ದಸರಾದ ಸವಿರುಚಿಯನ್ನು ಸಂಭ್ರಮಿಸಿದರು. ಹಾಗೂ ಇದೇ ವೇಳೆಯಲ್ಲಿ ಉತ್ತಮ ಸಾಂಸ್ಕೃತಿಕ  ಕಾರ್ಯಕ್ರಮ ನೀಡಿದ ಉತ್ತಮ ನಟನೆಗಾಗಿ ಜನಪ್ರತಿನಿಧಿಗಳಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಗ್ರಾಮೀಣ ದಸರಾದ ಅಂಗವಾಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ಖಾಸಗಿ ಮಾಲೀಕರುಗಳು ಸಹ ತಮ್ಮ ತಮ್ಮ ಸ್ವಂತ ಕಾಂಪ್ಲೆಕ್ಸ್ ಅಂಗಡಿ ಮಳಿಗೆಗಳಿಗೂ ವಿದ್ಯುತ್ ಲೈಟ್‍ಗಳನ್ನು ಅಳವಡಿಸಿಕೊಂಡು ಗ್ರಾಮೀಣ ದಸರಾಕ್ಕೆ ಮೆರಗುತರುವಂತೆ ಹನೂರು ಪಟ್ಟಣವನ್ನು ಕಂಗೊಳಿಸಿದರು.

 

 

► Follow us on –  Facebook / Twitter  / Google+

Facebook Comments

Sri Raghav

Admin