ಕಲಿಕೆಯತ್ತ ಗಮನಹರಿಸಲು ವಿದ್ಯಾರ್ಥಿಗಳಿಗೆ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

anekal

ಆನೇಕಲ್, ಮೇ 4- ವಿದ್ಯಾರ್ಥಿಗಳು ಟಿವಿ, ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗದೆ ಕಲಿಕೆಯತ್ತ ಹೆಚ್ಚು ಗಮನಹರಿಸಬೇಕು ಎಂದು ಬಿಟಿಎಲ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ರಂಗನಾಥ್ ಕರೆ ನೀಡಿದರು.ಬೊಮ್ಮಸಂದ್ರದಲ್ಲಿರುವ ಬಿಟಿಎಲ್ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಾಲೇಜು ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, ಉತ್ತಮ ಪ್ರಜೆಗಳು ನಿರ್ಮಾಣವಾಗುವುದು ಶಾಲಾ ಕೊಠಡಿಗಳಿಂದಲೇ ಈ ನಿಟ್ಟಿನಲ್ಲಿ ಶಿಕ್ಷಕರು ವಿಧ್ಯಾರ್ಥಿಗಳಿಗೆ ಪಾಠ ಪ್ರವಚನಗಳ ಜೊತೆಗೆ ದೇಶಾಭಿಮಾನ ಮೂಡಿಸಬೇಕು ಎಂದರು.

ಬಿಟಿಎಲ್ ವಿದ್ಯಾಸಂಸ್ಥೆಯ ಸಿಇಒ ಡಾ.ಆನಂದನ್ ಮಾತನಾಡಿ, ದಿ. ಡಾ. ಬಿ.ಟಿ. ಲಷ್ಮಣ್ ರವರು ಯಾವುದೇ ಸ್ವಾರ್ಥವನ್ನು ಇಟ್ಟುಕೊಳ್ಳದೆ, ಗ್ರಾಮೀಣ ಬಾಗದಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಈ ಭಾಗದಲ್ಲಿ ಬಿಟಿಎಲ್ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ ಎಂದು ತಿಳಿಸಿದರು. ಬಿಟಿಎಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುವರ್ಣ ಲಕ್ಷಣ್, ಬೀನಾ, ಪ್ರಾಂಶುಪಾಲರಾದ ಸುನೀಲ್ ಕುಮಾರ್ ಕುಲಕರ್ಣಿ, ಮದುರಗುಪ್ತ, ಶಿವಲಿಂಗಯ್ಯ, ಶಿವರಾಮ್ ಮತ್ತಿತರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin