ಕಲುಷಿತ ನೀರು ಕುಡಿದು 47 ಕುರಿಗಳ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

sheeps-dead-3
ರಾಯಚೂರು,ಮೇ18- ಅಕ್ಕಿ ಗಿರಣಿಯಿಂದ ಹೊರಬರುವ ಕಲುಷಿತ ನೀರು ಕುಡಿದು 47 ಕುರಿಗಳು ಮೃತಪಟ್ಟಿರುವ ಘಟನೆ ರಾಯಚೂರು ತಾಲ್ಲೂಕಿನ ಚಿಕ್ಕಸಗೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಸಗೂರು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಮಂಚಿಕೊಂಡ ರೈಸ್ ಮಿಲ್‍ನಿಂದ ಕಲುಷಿತ ನೀರು ಹೊರಗೆ ಬಿಟ್ಟಿದ್ದು , ಕುರಿಗಳು ಮೇಯಲು ಬಂದಾಗ ಈ ನೀರು ಕುಡಿದು ಸಾವನ್ನಪ್ಪಿವೆ.

ಕುರಿಗಳು ಚಿಕ್ಕಸಗೂರಿನ ಮಲ್ಲೇಶ್ ಎಂಬುವರಿಗೆ ಸೇರಿದ್ದು , ಲಕ್ಷಾಂತರ ರೂ. ಬೆಲೆ ಬಾಳುವ ಕುರಿಗಳನ್ನು ಕಳೆದುಕೊಂಡು ನಷ್ಟ ಅನುಭವಿಸಿದ್ದಾರೆ.
ಈ ಹಿಂದೆಯೂ ಸುತ್ತಮುತ್ತಲಿನ ಗ್ರಾಮದ ಹಲವು ಜಾನುವಾರುಗಳು ರೈಸ್‍ಮಿಲ್‍ನಿಂದ ಬರುವ ನೀರನ್ನು ಕುಡಿದು ಮೃತಪಟ್ಟಿದ್ದವು ಎಂದು ಗ್ರಾಮಸ್ಥರು ಹೇಳಿದ್ದಾರೆ. ನೀರನ್ನು ಹೊರ ಬಿಡುವ ಮೊದಲು ಶುದ್ಧೀಕರಿಸಿ ಬಿಡಬೇಕು. ಆದರೆ ಯಾವುದೇ ನಿಯಮಗಳನ್ನು ರೈಸ್ ಮಿಲ್‍ನವರು ಪಾಲಿಸದೆ ನೇರವಾಗಿ ಕಲುಷಿತ ನೀರನ್ನು ಕಾಲುವೆಗೆ ಬಿಟ್ಟಿದ್ದಾರೆ. ಈ ನೀರು ಕೃಷ್ಣಾ ನದಿ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ನದಿ ನೀರನ್ನು ಕುಡಿದರೆ ಜಾನುವಾರುಗಳಷ್ಟೇ ಅಲ್ಲ ಜನರು ಬಲಿಯಾಗಬೇಕಾಗುತ್ತದೆ. ಕೂಡಲೇ ಪರಿಸರ ಮಾಲಿನ್ಯ ಇಲಾಖೆಯವರು ಎಚ್ಚೆತ್ತುಕೊಂಡು ಕಲುಷಿತ ನೀರು ಹೊರಬಿಡದಂತೆ ರೈಸ್ ಮಿಲ್ ಮಾಲೀಕರಿಗೆ ಎಚ್ಚರಿಕೆ ಕೊಡಬೇಕು ಹಾಗೂ ಮಿಲ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ. ಕುರಿಗಳು ಮೃತಪಟ್ಟಿರುವ ಪ್ರಕರಣ ಸಂಬಂಧ ರಾಯಚೂರು ಗ್ರಾಮಾಂತರ ಪೊ ಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin