ಕಲ್ಬುರ್ಗಿಹತ್ಯೆ ಆರೋಪಿಗಳ ಬಂಧಿಸಿ : ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

kalbutragi

ಮಳವಳ್ಳಿ,ಆ.31- ಸಾಹಿತಿ ಹಾಗೂ ವೈಜ್ಞಾನಿಕ ಚಿಂತಕರಾದ ಡಾ.ಕಲ್ಬುರ್ಗಿರವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿತು.ಪ್ರತಿಭಟನಾಕಾರರು ತಮ್ಮ ಕರ್ತವ್ಯ ಮುಗಿಸಿಕೊಂಡು ತಾಲ್ಲೂಕು ಕಚೇರಿಗೆ ಆಗಮಿಸಿ ಡಾ.ಕಲ್ಬುರ್ಗಿಯವರನ್ನು ಕಿಡಿಗೇಡಿಗಳು ಹತ್ಯೆ ಮಾಡಿ ಇಲ್ಲಿಗೆ ಒಂದು ವರ್ಷವಾಗಿದ್ದು ಇನ್ನು ಈ ಕಿಡಿಗೇಡಿಗಳನ್ನು

ಬಂಧಿಸಿಲ್ಲ. ಈ ಬಗ್ಗೆ ಸರ್ಕಾರ ತಕ್ಷಣ ಕಾರ್ಯಪೌವೃತ್ತವಾಗಿ ಇಂತಹ ಮಹಾನ್ ಚಿಂತಕರನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಘೊಷಣೆಗಳನ್ನು ಕೂಗಿದರು.ಅಲ್ಲದೆ ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಜಾರಿಗೆ ಒತ್ತಾಯಿಸಿ ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ದಿನೇಶ್‍ಚಂದ್ರರವರಿಗೆ ಮನವಿ ಪತ್ರಸಲ್ಲಿಸಿತು.ಪ್ರತಿಭಟನೆಯಲ್ಲಿ ಕಾಳರಸಯ್ಯ, ಪ್ರಶಾಂತಬಾಬು ಶೋಭಾ, ಶೈಲಜಾ, ಇನ್ನು ಮುಂತಾದವರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin