ಕಲ್ಯಾಣಮಂಟಪದಲ್ಲಿ 7ಲಕ್ಷ ರೂ.ಮೌಲ್ಯದ ಆಭರಣ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ಮದುವೆ ನಿಮಿತ್ತ ಕಲ್ಯಾಣ ಮಂಟಪದ ಕೊಠಡಿಯಲ್ಲಿಟ್ಟಿದ್ದ ಸುಮಾರು 7ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳಿದ್ದ ಬ್ಯಾಗನ್ನು ಚೋರರು ಕಳ್ಳತನ ಮಾಡಿರುವ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಹೊಸೂರಿನ, ಬೆಂಗಳೂರಿನಲ್ಲಿ ವಾಸವಿರುವ ಆರ್.ಸ್ವಾತಿ ಎಂಬುವರ ತಂಗಿಯ ಮದುವೆ ಜಯನಗರ 4ನೇ ಟಿ ಬ್ಲಾಕ್, 18ನೇ ಮುಖ್ಯರಸ್ತೆಯಲ್ಲಿರುವ ಕಲ್ಯಾಣಮಂಟಪದಲ್ಲಿ ಶನಿವಾರ ಮತ್ತು ಭಾನುವಾರವಿತ್ತು.

ಈ ನಿಮಿತ್ತ ಸ್ವಾತಿ ಅವರು ಸಂಬಂಧಿಕರೊಂದಿಗೆ ಕಲ್ಯಾಣಮಂಟಪಕ್ಕೆ ಬಂದಿದ್ದು, ಕೊಠಡಿಯಲ್ಲಿ ಚಿನ್ನದ ಆಭರಣಗಳಿದ್ದ ಬ್ಯಾಗ್‍ನ್ನು ಇಟ್ಟು ಇತರೆ ಕೆಲಸಗಳಲ್ಲಿ ನಿರತರಾಗಿದ್ದರು. ಸಂಜೆ 7.30ರ ಸಮಯದಲ್ಲಿ ಆಭರಣವಿದ್ದ ಬ್ಯಾಗ್ ತೆಗೆದುಕೊಳ್ಳಲು ಸ್ವಾತಿ ಅವರು ಕೊಠಡಿಗೆ ಹೋದಾಗ ಬ್ಯಾಗ್ ನಾಪತ್ತೆಯಾಗಿತ್ತು. ಗಾಬರಿಯಾದ ಸ್ವಾತಿ ತಕ್ಷಣ ಎಲ್ಲಾ ಕಡೆ ಹುಡುಕಾಡಿ, ಸಂಬಂಧಿಕರನ್ನು ವಿಚಾರಿಸಿದರಾದರೂ ಆಭರಣಗಳು ಪತ್ತೆಯಾಗಿಲ್ಲ.

ಈ ಸಂಬಂಧ ಜಯನಗರ ಪೊಲೀಸ್ ಠಾಣೆಗೆ ತೆರಳಿ ಸುಮಾರು 7ಲಕ್ಷ ರೂ. ಮೌಲ್ಯದ ಚಿನ್ನದ ಆಭರಗಳಿದ್ದ ಬ್ಯಾಗ್ ಕಳ್ಳತನವಾಗಿದೆ ಎಂದು ಸ್ವಾತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ