ಕಲ್ಯಾಣಿಯಲ್ಲಿ ಕಾಲು ತೊಳೆಯಲು ಹೋದ ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಾಗಡಿ, ಏ.8-ಕಲ್ಯಾಣಿಯಲ್ಲಿ ಕಾಲು ತೊಳೆಯಲು ಹೋದ ವ್ಯಕ್ತಿ ಕಾಲು ಜಾರಿಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಕಿರಣ್‍ಕುಮಾರ್(32) ಮೃತ ದುರ್ದೈವಿ. ಈತ ನಿನ್ನ ಸಂಜೆ ಪಟ್ಟಣದ ತಿರುಮಲೆ ರಸ್ತೆಯಲ್ಲಿರುವ ಗುಂಡಯ್ಯನ ಬಾವಿ ಕಲ್ಯಾಣಿಗೆ ಹೋಗಿ ಕೈಕಾಲು ತೊಳೆಯುತ್ತಿದ್ದಾಗ ಕಾಲುಜಾರಿ ಬಿದ್ದಿದ್ದು ಮೃತ ದೇಹ ಇನ್ನು ಪತ್ತೆಯಾಗಿಲ್ಲ.

ಪುರಾತನ ಕಲ್ಯಾಣಿ 80 ರಿಂದ 85 ಅಡಿ ಆಳವಿದ್ದು, ನಿನ್ನೆ ಸಂಜೆಯಿಂದಲೂ ಶವ ಪತ್ತೆ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ನಡೆಸುತ್ತಿದ್ದು, ಇನ್ನೂ ಶವ ಪತ್ತೆಯಾಗಿಲ್ಲ. ನಾಲ್ಕು ಟ್ರಾಕ್ಟರ್‍ಗಳ ಮೂಲಕ ನೀರನ್ನು ಹೊರತೆಗೆಯಲಾಗುತ್ತಿದೆ.

ಪತ್ನಿ ರೂಪ, ಮಗ ಪ್ರಜ್ವಲ್ ಹಾಗೂ ನಾಲ್ಕೂವರೆ ತಿಂಗಳ ಶಿವಾಲಿಯನ್ನು ಅಗಲಿರುವ ಕಿರಣ್‍ಕುಮಾರ್ ಪತ್ತೆಗೆ ಪೊಲೀಸರು ಹಾಗೂ ಅಗ್ನಿಶಾಮಕದಳ ಹರಸಾಹಸ ಮಾಡುತ್ತಿದೆ. ಆದರೆ ಸ್ಥಳಕ್ಕೆ ತಹಶೀಲ್ದಾರ್ ಅಥವಾ ಇತರೆ ಅಧಿಕಾರಿಗಳು ಬಾರದೆ ನಿರ್ಲಕ್ಷ್ಯವಹಿಸಿದ್ದಾರೆ.

Facebook Comments