ಕಲ್ಲಂಗಡಿ ಹಣ್ಣು

ಈ ಸುದ್ದಿಯನ್ನು ಶೇರ್ ಮಾಡಿ
ಕಲ್ಲಂಗಡಿ ಹಣ್ಣು  ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಅಧಿಕ. ಈ ಹಣ್ಣನ್ನು ಸೇವಿಸುವುದರಿಂದ ಮೂತ್ರ ವಿಸರ್ಜನೆಯ ಪ್ರಮಾಣ ಹೆಚ್ಚುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಹಾಗೂ ಸೂರ್ಯನ ತಾಪ ಅಧಿಕವಾಗಿರುವ ತಿಂಗಳುಗಳಲ್ಲಿ ಈ ಹಣ್ಣನ್ನು ಪ್ರತಿದಿನ ಸೇವಿಸಬಹುದು.  ಕಲ್ಲಂಗಡಿ ಹಣ್ಣು ಸೇವಿಸುವುದರಿಂದ, ಬಿಸಿಲ ಬೇಗೆಯಿಂದ ಉಂಟಾಗುವ ಆಯಾಸ ಪರಿಹಾರವಾಗುತ್ತದೆ. ಬಾಯಾರಿಕೆ ತಗ್ಗುತ್ತದೆ ಮತ್ತು ದೇಹ ತಂಪಾಗುತ್ತದೆ.   ಆಮಶಂಕೆ, ಅತಿಸಾರ, ವಾಂತಿಯಾಗುವಿಕೆ, ಕಾಲರಾ ರೋಗ ಇತ್ಯಾದಿ ಸಂದರ್ಭಗಳಲ್ಲಿ ರೋಗಿಯ ದೇಹದಲ್ಲಿ ಜಲಾಂಶದ ಕೊರತೆ ಉಂಟಾಗುತ್ತದೆ. ಈ ಕೊರತೆಯನ್ನು ನೀಗಿಸಲು ಒಂದು ಲೋಟ ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದು ನಿಂಬೆಹಣ್ಣು ಹಿಂಡಿ ಕುಡಿಯುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.  ಕಲ್ಲಂಗಡಿ ಹಣ್ಣು  ತಾಜವಾದ ಮುಖ್ಯ ಹಣ್ಣುಗಳಲ್ಲಿ ಒಂದು. ಇದನ್ನು ಆರೋಗ್ಯದ ಖಜಾನೆ ಎಂದೇ ಪರಿಗಣಿಸಲಾಗಿದ್ದು, ಯಥೇಚ್ಚವಾದ ನೀರು ಸಿಹಿ ರೂಪದಲ್ಲಿ ಇರುವುದು ನಿಸರ್ಗದ ಒಂದು ಅದ್ಭುತ. ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಎಲ್-ಸಿಟ್ರುಲೈನ್ ಎಂಬ ಅರೋಗ್ಯಕರ ರಾಸಾಯನಿಕ ವಸ್ತು ಇರುತ್ತದೆ. ಇದನ್ನು ಸೇವಿಸಿದರೆ  ಅಮೈನೋ ಆಮ್ಲಗಳು ಬಿಡುಗಡೆಯಾಗುತ್ತದೆ. ಇದು ಅಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಅಧಿಕ. ಈ ಹಣ್ಣನ್ನು ಸೇವಿಸುವುದರಿಂದ ಮೂತ್ರ ವಿಸರ್ಜನೆಯ ಪ್ರಮಾಣ ಹೆಚ್ಚುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಹಾಗೂ ಸೂರ್ಯನ ತಾಪ ಅಧಿಕವಾಗಿರುವ ತಿಂಗಳುಗಳಲ್ಲಿ ಈ ಹಣ್ಣನ್ನು ಪ್ರತಿದಿನ ಸೇವಿಸಬಹುದು. ಕಲ್ಲಂಗಡಿ ಹಣ್ಣು ಸೇವಿಸುವುದರಿಂದ, ಬಿಸಿಲ ಬೇಗೆಯಿಂದ ಉಂಟಾಗುವ ಆಯಾಸ ಪರಿಹಾರವಾಗುತ್ತದೆ. ಬಾಯಾರಿಕೆ ತಗ್ಗುತ್ತದೆ ಮತ್ತು ದೇಹ ತಂಪಾಗುತ್ತದೆ.ಆಮಶಂಕೆ, ಅತಿಸಾರ, ವಾಂತಿಯಾಗುವಿಕೆ, ಕಾಲರಾ ರೋಗ ಇತ್ಯಾದಿ ಸಂದರ್ಭಗಳಲ್ಲಿ ರೋಗಿಯ ದೇಹದಲ್ಲಿ ಜಲಾಂಶದ ಕೊರತೆ ಉಂಟಾಗುತ್ತದೆ. ಈ ಕೊರತೆಯನ್ನು ನೀಗಿಸಲು ಒಂದು ಲೋಟ ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದು ನಿಂಬೆಹಣ್ಣು ಹಿಂಡಿ ಕುಡಿಯುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.ಕಲ್ಲಂಗಡಿ ಹಣ್ಣು ತಾಜವಾದ ಮುಖ್ಯ ಹಣ್ಣುಗಳಲ್ಲಿ ಒಂದು. ಇದನ್ನು ಆರೋಗ್ಯದ ಖಜಾನೆ ಎಂದೇ ಪರಿಗಣಿಸಲಾಗಿದ್ದು, ಯಥೇಚ್ಚವಾದ ನೀರು ಸಿಹಿ ರೂಪದಲ್ಲಿ ಇರುವುದು ನಿಸರ್ಗದ ಒಂದು ಅದ್ಭುತ. ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಎಲ್-ಸಿಟ್ರುಲೈನ್ ಎಂಬ ಅರೋಗ್ಯಕರ ರಾಸಾಯನಿಕ ವಸ್ತು ಇರುತ್ತದೆ. ಇದನ್ನು ಸೇವಿಸಿದರೆ ಅಮೈನೋ ಆಮ್ಲಗಳು ಬಿಡುಗಡೆಯಾಗುತ್ತದೆ. ಇದು ಅಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತದೆ.
Facebook Comments

Sri Raghav

Admin