ಕಲ್ಲಪ್ಪ ಹಂಡಿಭಾಗ್ ಕುಟುಂಬಕ್ಕೆ ಅಧಿಕಾರಿಗಳ ಸಂಘದಿಂದ 4 ಲಕ್ಷ ರೂ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

ka;lllappa
ಬೆಂಗಳೂರು, ಆ.27-ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಕುಟುಂಬಕ್ಕೆ ಹಿಂದುಳಿದ ವರ್ಗಗಳ ಅಧಿಕಾರಿಗಳ ಸಂಘದ ವತಿಯಿಂದ 4 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಯಿತು.  ಹಿಂದುಳಿದ ವರ್ಗಗಳ ಅಕಾರಿಗಳ ಸಂಘದ ಪದಾಕಾರಿಗಳು ಇಂದು ಅವರ ನಿವಾಸಕ್ಕೆ ತೆರಳಿ ಮೂರು ಲಕ್ಷ ರೂ.ಗಳನ್ನು ಅವರ ಪೋಷಕರಿಗೆ, ಒಂದು ಲಕ್ಷ ರೂ.ವನ್ನು ಅವರ ಪತ್ನಿಗೆ ನೀಡಿದರು.  ಈ ಸಂದರ್ಭದಲ್ಲಿ ಕಲ್ಲಪ್ಪ ಹಂಡಿಭಾಗ್ ಅವರ ತಂದೆ ಬಸಪ್ಪ ತಮ್ಮ ಪುತ್ರ ಯಾವುದೇ ತಪ್ಪು ಮಾಡಿಲ್ಲ. ಯಾರದೋ ಕುತಂತ್ರಕ್ಕೆ ಬಲಿಯಾಗಿದ್ದಾನೆ ಎಂದು ಕಂಬನಿ ಮಿಡಿದರು. ತಮ್ಮ ಕಷ್ಟಕ್ಕೆ ಸ್ಪಂದಿಸಿದ ಅಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.  ಸರ್ಕಾರ ಕಲ್ಲಪ್ಪ ಅವರ ಪತ್ನಿಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದೆ. ಶೀಘ್ರ ಅದು ದೊರೆಯುವಂತಾಗಲಿ ಎಂದು ಒತ್ತಾಯಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin