ಕಲ್ಲಿದ್ದಲು ಹಗರಣ : ಐವರ ವಿರುದ್ಧ ವಂಚನೆ ಆರೋಪ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Coal-Scam

ನವದೆಹಲಿ, ಆ.19- ಬಹುಕೋಟಿ ರೂಪಾಯಿ ಕಲ್ಲಿದ್ದಲು ನಿಷೇಧ ಮಂಜೂರಾತಿ ಹಗರಣದಲ್ಲಿ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ ಮತ್ತು ಇತರ ಐವರ ವಿರುದ್ಧ ವಿಶೇಷ ನ್ಯಾಯಾಲಯವೊಂದು ವಂಚನೆ ಮತ್ತು ಕ್ರಿಮಿನಲ್ ಸಂಚಿನ ಆರೋಪ ದಾಖಲಿಸಿದೆ. ಈ ಪ್ರಕರಣದಲ್ಲಿ ಕಲ್ಲಿದ್ದಲು ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್.ಕ್ರೊಫಾ ಮತ್ತು ಆಗಿನ ನಿರ್ದೇಶಕ ಕೆ.ಸಿ.ಸಾಮ್ರಿಯಾ ಹಾಗೂ ವಿಕಾಸ್ ಮೆಟಲ್ಸ್ ಅಂಡ್ ಪವರ್ಸ್ಿ ಲಿಮಿಟೆಡ್ ಮತ್ತು ಅದರ ಇಬ್ಬರು ಅಧಿಕಾರಿಗಳ ವಿರುದ್ಧವೂ ದೋಷಾರೋಪಗಳನ್ನು ದಾಖಲಿಸಿಕೊಳ್ಳಲಾಗಿದೆ.   ನೀತಿ-ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಸಂಸ್ಥೆಗಳಿಗೆ ಕಲ್ಲಿದ್ದಲು ನಿಕ್ಷೇಪ ಮತ್ತು ಗಣಿಗಾರಿಕೆಗೆ ಅವಕಾಶ ನೀಡಿರುವುದರಿಂದ ಹಿಂದೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿತ್ತು. ಕಲ್ಲಿದ್ದಲು ಹಗರಣ ಸಂಬಂಧ ವಿಶೇಷ ನ್ಯಾಯಾಲಯವೊಂದು ಇತ್ತೀಚೆಗೆ ರತಿ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒಗೆ ಮೂರು ವರ್ಷಗಳ ಸಜೆ ಹಾಗೂ ಇನ್ನಿಬ್ಬರು ಅಧಿಕಾರಿಗಳಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin