ಕಲ್ಲಿನಿಂದ ತಲೆ ಜಜ್ಜಿ ಯುವಕನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

murder-77

ಕಾರವಾರ, ಆ.12- ಕಲ್ಲಿನಿಂದ ತಲೆಜಜ್ಜಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿದ್ದಾಪುರ ತಾಲ್ಲೂಕಿನ ಹಾಲ್ಕಣಿ ಗ್ರಾಮದಲ್ಲಿ ನಡೆದಿದೆ.ಶರತ್ ಗಣೇಶ್ ಆಚಾರಿ(21) ಕೊಲೆಯಾದ ಯುವಕನಾಗಿದ್ದು, ಇಂದು ಬೆಳಗ್ಗೆ ಈತನ ಶವ ಗ್ರಾಮದ ಹೊರವಲಯದ ಹೀರೇಕೈ ಬಳಿ ಪತ್ತೆಯಾಗಿದೆ.ಬಿಕಾಂ ವಿದ್ಯಾರ್ಥಿಯಾದ ನಿನ್ನೆ ಕಾಲೇಜಿಗೆ ತೆರಳಿದ್ದ ಈತ ಮನೆಗೆ ವಾಪಸ್ ಆಗಿರಲಿಲ್ಲ. ಪೋಷಕರು  ಈತ ಸ್ನೇಹಿತನ ಮನೆಗೆ ಹೋಗಿರಬಹುದೆಂದು ಸುಮ್ಮನಿದ್ದರು.

ಆದರೆ, ಇಂದು ಬೆಳಗ್ಗೆ ಆತ ಕೊಲೆಯಾಗಿರುವುದನ್ನು ಕೇಳಿ ದಿಗ್ಭ್ರಾಂತರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಆತನ ಗುರುತು ಪತ್ತೆಹಚ್ಚಿ ಮರುಗಿದ್ದಾರೆ.ಗ್ರಾಮದಲ್ಲಿ ಭೀಕರ ಘಟನೆ ನಡೆದಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದು, ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin