ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್ : ಇಬ್ಬರು ಗ್ಯಾಂಗಮನ್’ಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

14

ಇಳಕಲ್,ಸೆ29-ಸಮೀಪದ ಬಂಡರಗಲ್ಲ ಗ್ರಾಮದಲ್ಲಿ ಬೊಮ್ಮಲಿಂಗಯ್ಯ ಇಳಾಳ ಎಂಬುವರ ಒಡೆತನದಲ್ಲಿರುವ ಆರ್. ಕೆ.ಎಜನ್ಸೀ ವತಿಯಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ನಿನ್ನೆ ಮಧ್ಯಾಹ್ನ ಬ್ಲಾಸ್ಟಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಇಬ್ಬರು ಗ್ಯಾಂಗಮನ್ ಸಾವನ್ನೊಪ್ಪಿರುವ ದುರ್ಘಟನೆಯೊಂದು ವರದಿಯಾಗಿದೆ.ಸಾವನ್ನಪ್ಪಿರುವ ವ್ಯಕ್ತಿಗಳು ನಗರ ಸಮೀಪದ ಬಲಕುಂದಿ ತಾಂಡಾದ ನಿವಾಸಿಗಳಾದ ಅಮರೇಶ ಹನಮಂತಪ್ಪ ಪವಾರ (28) ಪರಸಪ್ಪ ಹನಮಂತಪ್ಪ ಪವಾರ (38) ಎಂದು ಗುರುತಿಸಲಾಗಿದೆ.

ಕಳೆದ 5 ವರ್ಷಗಳಿಂದ ಆರ್.ಕೆ.ಎಜೆನ್ಸಿ ನಡೆಸುತ್ತಿರುವ ಕ್ವಾರಿಯಲ್ಲಿ ಗ್ಯಾಂಗಮನ್ ಆಗಿ ಕೆಲಸ ಮಾಡುತ್ತಿದ್ದು, ನಿನ್ನೆ ಮಧ್ಯಾಹ್ನ ಹೋಲು ಹಾಕಿದ ಕಲ್ಲಿನಲ್ಲಿ ಮದ್ದು ತುಂಬಿ ಬ್ಲಾಸ್ಟ್ ಮಾಡಿದಾಗ ಕಲ್ಲುಗಳು ಸಿಡಿದು ಎದೆ ಕೈ ಮುಖಕ್ಕೆ ತೀವ್ರವಾಗಿ ಬಡಿದರ ಪರಣಾಮವಾಗಿ ಅಮರೇಶ ಎಂಬಾತನನ್ನು ಸಮೀಪದ ಕಠಾರಿಯಾ ನರ್ಸಿಂಗ್ ಹೋಮ್ ಮತ್ತು ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ ಗಂಭೀರವಾಘಿ ಗಾಯಗೊಂಡ ಪರಸಪ್ಪ ಎಂಬಾತನನ್ನು ಚಿಕಿತ್ಸೆಗಾಗಿ ಬಾಗಲಕೋಟೆಗೆ ತೆರಳುವ ಮಾರ್ಗದಲ್ಲಿಯೇ ಸಾವನ್ನಪ್ಪಿದನು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರದ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕೇಳಲಾಗಿ ಕ್ವಾರಿಯಲ್ಲಿ ಕಾಲು ಜರಿ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಾರೆ. ಇವರು ವಾಸ್ತವವನ್ನು ಮರೆ ಮಾಚುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಕುಷ್ಟಗಿ ಸಿಪಿಐ ಮಾಡುತ್ತಾರೆ ಎಂದು ಎಎಸೈ ಶಾಂತಪ್ಪ ಬೆಲ್ಲದ ನುಣಚಿಕೊಳ್ಳುತ್ತಿದ್ದಾರೆ.ಘಟನಾ ಸ್ಥಳಕ್ಕೆ ಪತ್ರಕರ್ತರು ಹೋಗಿ ನೋಡಲಾಗಿ ಗ್ರಾಮದ ಜನತೆಯನ್ನು ಈ ಬಗ್ಗೆ ಕೇಳಲಾಗಿ ಇದು ಇಡಿಯಿಂದ ಸ್ಪೋಟಕಗೊಂಡು ಸಾವನ್ನೊಪ್ಪಿದ್ದಾರೆ ಎಂದು ಹೇಳುತ್ತಾರೆ. ಆಯಾ ತಪ್ಪಿ ಕಾಲು ಜರಿ ಕ್ವಾರಿಯಲ್ಲಿ ಬಿದ್ದರು ಎಂದು ದೂರು ದಾಖಲಿಸಿಕೊಂಡ ಪೊಲಿಸರು ಸಾವನ್ನಪ್ಪಿರುವ ಇಬ್ಬರ ಭಾವಚಿತ್ರವನ್ನು ನೋಡಿದಾಗ ಕೊಡಲಿಯಿಂದ ಕಡಿದ ರೀತಿಯಲ್ಲಿ ಇಡಿ ಸ್ಪೋಟದಿಂದ ಕಲ್ಲುಗಳು ಸಿಡಿದು ದೇಹ. ತಲೆ, ಕೈಗೆ ಬಿದ್ದಿರುವ ಬಡಿತದಿಂದಾಗಿ ನಡೆದ ಘಟನೆಗೆ ಪುಷ್ಟಿಯನ್ನು ನೀಡುತ್ತದೆ. ಶವದ ಮರಣೋತ್ತರ ಪರೀಕ್ಷೆಯನ್ನು ಇಳಕಲ್ ಸರಕಾರಿ ಆಸ್ಪತ್ರೆಯಲ್ಲಿ ಮಾಡಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin