ಕಲ್ಲು ಗಣಿಗಾರಿಕೆ ಡೈನಾಮೆಂಟ್ ಸಿಡಿತದಿಂದ ಬಿರುಕುಬಿಟ್ಟ ಮನೆಗಳು, ರೊಚ್ಚಿಗೆದ್ದ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಚಿತ್ರದುರ್ಗ, ಜ.30-ಕಲ್ಲು ಗಣಿಗಾರಿಕೆ ವೇಳೆ ಕ್ರಷರ್ ಕಾರ್ಮಿಕರು ಸಿಡಿಸಿದ ಡೈನಾಮೆಂಟ್‍ನಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು 10ಕ್ಕೂ ಹೆಚ್ಚು ಲಾರಿಗಳಿಗೆ ಬೆಂಕಿ ಹಚ್ಚಿರುವ ಘಟನೆ ಹೊಳಲ್ಕೆರೆ ತಾಲೂಕಿನ ಕಡೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.  ಕ್ರಷರ್ ಮೇಲೆ ಕಳೆದ ರಾತ್ರಿ ಅಬ್ಬಿಗೆರೆ ಗ್ರಾಮದ ನೂರಾರು ಜನ ನುಗ್ಗಿ ಅಲ್ಲಿದ್ದ 15 ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಸ್ಥಳದಲ್ಲೇ ಇದ್ದ 10 ಲಾರಿ, ಜನರೇಟರ್ ಸೇರಿದಂತೆ ಕ್ರಷರ್‍ಗೆ ಬಳಸುತ್ತಿದ್ದ ವಸ್ತುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕ್ರಷರ್ ಮಾಲೀಕ ಹನುಮಂತನಿಗೂ ಗ್ರಾಮಸ್ಥರು ಥಳಿಸಿದ್ದಾರೆ. ಗಾಯಗೊಂಡ ಕಾರ್ಮಿಕರು ಮತ್ತು ಮಾಲೀಕನನ್ನು ಚಿಕ್ಕ ಜಾಜೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಚಿಕ್ಕಜಾಜೂರು ಪೊಲೀಸರು ಆಗಮಿಸಿ ಬಂದೋಬಸ್ತ್ ಕಲ್ಪಿಸಿದ್ದಾರೆ.

ಅಬ್ಬಿಗೆರೆ ಹಾಗೂ ಕಡೂರು ಎರಡು ಗ್ರಾಮಗಳಲ್ಲಿ ಕೆಎಸ್‍ಆರ್‍ಪಿಯ ಎರಡು ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಬಂಧನ ಭೀತಿಯಿಂದ ನೂರಾರು ಗ್ರಾಮಸ್ಥರು ಊರು ತೊರೆದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin