ಕಲ್ವರಿ ಜಲಾಂತರ್ಗಾಮಿ ಯುದ್ಧನೌಕೆ ಭಾರತೀಯ ನೌಕಾಪಡೆಗೆ ಸಮರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

submarine--01 submarine--04

ಮುಂಬೈ, ಡಿ.14-ವೈರಿಗಳ ಮೇಲೆ ನಿಖರವಾಗಿ ಆಕ್ರಮಣ ಮಾಡಬಲ್ಲ ಅತ್ಯಂತ ಸಮರ್ಥ ಕಲ್ವರಿ ಜಲಾಂತರ್ಗಾಮಿಯನ್ನು(ಯುದ್ಧನೌಕೆ) ಪ್ರಧಾನಿ ನರೇಂದ್ರ ಮೋದಿ ಇಂದು ಭಾರತೀಯ ನೌಕಾಪಡೆ ಸೇವೆಗೆ ಸಮರ್ಪಿಸಿದರು. ಮುಂಬೈನ ಮಾಝ್‍ಗಾನ್ ಬಂದರಿನಲ್ಲಿ ನಡೆದ ಈ ಸಮಾರಂಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ನೌಕಾಪಡೆ ಮುಖ್ಯಸ್ಥ ಸುನಿಲ್ ಲನ್‍ಬಾ ಹಾಗೂ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

submarine--05

ಸ್ಕಾರ್ಪಿಯನ್ ಶ್ರೇಣಿಯ ಜಲಾಂತರ್ಗಾಮಿಯನ್ನು ಸೇವೆಗೆ ಸಮರ್ಪಿಸಿ ಮಾತನಾಡಿದ ಪ್ರಧಾನಿ ಮೋದಿ, ಮೇಕ್-ಇನ್-ಇಂಡಿಯಾಗೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ. ನೌಕಾ ಪಡೆಯ ಸಾಮಥ್ರ್ಯವನ್ನು ಹೆಚ್ಚಿಸಲು ಈ ಸಮರನೌಕೆ ನೆರವಾಗಲಿದೆ ಎಂದು ಹೇಳಿದರು. ಹಿಂದೂ ಮಹಾಸಾಗರದ ಆಳದಲ್ಲಿ ಕಂಡುಬರುವ ಆಕ್ರಮಣಕಾರಿ ಟೈಗರ್ ಶಾರ್ಕ್(ಕಲ್ವರಿ) ಹೆಸರನ್ನೇ ಈ ನೌಕೆಗೆ ಇಡಲಾಗಿದೆ. ವಿದ್ಯುತ್ ಮತ್ತು ಡೀಸೆಲ್ ಚಾಲಿತ ಈ ನೌಕೆಯನ್ನು 120 ದಿನಗಳ ವ್ಯಾಪಕ ಸಾಗರ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ.

submarine--03

ಫ್ರಾನ್ಸ್ ನ ನೌಕಾ ರಕ್ಷಣಾ ಮತ್ತು ಇಂಧನ ಸಂಸ್ಥೆ ಡಿಸಿಎನ್‍ಎಸ್ ಈ ಸಬ್‍ಮರೀನ್‍ಗಳನ್ನು ವಿನ್ಯಾಸಗೊಳಿಸಿದ್ದು, ಭಾರತೀಯ ನೌಕಾಪಡೆಯ ಪ್ರಾಜೆಕ್ಟ್-75 ಭಾಗವಾಗಿ ಮುಂಬೈನ ಮಾಝಾಗಾನ್ ಡಾಕ್ ಲಿಮಿಟೆಡ್(ಎಂಡಿಎಲ್) ನಿರ್ಮಿಸಿದೆ. ಪ್ರಥಮ ಕಲ್ವರಿ ಜಲಾಂತರ್ಗಾಮಿಯನ್ನು 8ನೇ ಡಿಸೆಂಬರ್, 1967ರಲ್ಲಿ ನೌಕಾಪಡೆ ಸೇವೆಗೆ ಸಮರ್ಪಿಸಲಾಗಿತ್ತು.

submarine--01

submarine--02

 

Facebook Comments

Sri Raghav

Admin